ಬ್ರಹ್ಮಾವರ : ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎರಡು ದಿನದಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೋಮವಾರ ಸಂಜೆ ಇಲ್ಲಿನ ಠಾಣಾ ಸಿಬ್ಬಂದಿಗಳಲ್ಲಿ ಮಹಿಳೆಯರು ಠಾಣೆಯ ಎದುರು ರಂರೋಲಿ ಬಿಡಿಸಿದ್ರೆ ಪುರುಷ ಸಿಬ್ಬಂದಿಗಳು ಠಾಣೆಯನ್ನು ಮತ್ತು ಗನ್ ಗಳ ಪೂಜೆ ತಯಾರಿ ಮಾಡುತ್ತಾ ತಳಿರು ತೋರಣದ ಸಿದ್ದತೆಮಾಡಿದ್ದರು.
ಮಂಗಳವಾರ ಬೆಳಿಗ್ಗೆ ನಡೆದ ಆಯುಧ ಪೂಜೆಗೆ ಪುರುಷರು ಸಾಂಪ್ರದಾಯಕ ಬಿಳಿ ಪಂಚೆ ಶರ್ಟ್ ಧರಿಸಿದರೆ ಮಹಿಳಾ ಸಿಬ್ಬಂದಿ ಹಸಿರು ಬಣ್ಣದ ಸೀರೆಯಲ್ಲಿ ಬಂದು ಪೂಜೆಯಲ್ಲಿ ಭಾಗಿಯಾದರು..ಪಿ ಎಸ್ ಐ ಗುರುನಾಥ ಬಿ ಹಾದಿಮನೆಯವರು ಪೂಜಾ ಕಾರ್ಯ ನೆರವೇರಿಸಿದರು.ಇಲ್ಲಿ 27 ಪುರುಷ ಸಿಬ್ಬಂದಿ ಮತ್ತು 8 ಮಹಿಳಾ ಸಿಬ್ಬಂದಿ ಇದ್ದಾರೆ.
ವೃತ್ತ ನೀರಿಕ್ಷಕ ಅನಂತ ಪದ್ಮನಾಭ ಮತ್ತು ಕಚೇರಿಯ ಸಿಬ್ಬಂದಿಗಳು ಕೂಡಾ ಪೂಜೆಯಲ್ಲಿ ಭಾಗಿಯಾಗಿದ್ದರು.
Kshetra Samachara
05/10/2022 09:22 am