ಬ್ರಹ್ಮಾವರ: ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇಂದು ವಿಜಯದಶಮಿ ಅಂಗವಾಗಿ ಆಯುಧ ಪೂಜೆ ಜರುಗಿತು. ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಸೋಮವಾರ ರಾತ್ರಿಯಿಂದಲೇ ಕಚೇರಿಯನ್ನು ಇಲ್ಲಿನ ಸಿಬ್ಬಂದಿ ತಳಿರು ತೋರಣ ಹೂವು ಮತ್ತು ರಂಗವಲ್ಲಿಯಿಂದ ಸಿಂಗರಿಸಿದ್ರು.
ಇಂದು(ಮಂಗಳವಾರ) ಬೆಳಿಗ್ಗೆ ನಾಯರ್ ಬೆಟ್ಟು ರಮೇಶ್ ಭಟ್ ಇವರಿಂದ ಪೂಜಾ ಕಾರ್ಯ ನೆರವೇರಿತು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಕರಾವಳಿಯ ಪ್ರಸಿದ್ಧ ಹುಲಿವೇಷ ತಂಡ ಠಾಣೆಯಲ್ಲಿ ನರ್ತಿಸಿ ಸಾರ್ವಜನಿಕರ ಗಮನಸೆಳೆಯಿತು.
Kshetra Samachara
04/10/2022 07:29 pm