ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉಡುಪಿಯ ರಾಧಮ್ಮ ರಾಘವ ಆಚಾರ್ಯಗೆ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಜನಪದ ಕರಕುಶಲ ಕಲಾವಿಭಾಗದಲ್ಲಿ ಉಡುಪಿಯ ರಾಧಮ್ಮ ರಾಘವ ಆಚಾರ್ಯ ಅವರಿಗೆ ರಾಯಚೂರಿನ ಸಿಂಧನೂರಿನಲ್ಲಿ ಪ್ರಧಾನ ಮಾಡಲಾಯಿತು.

ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರಾದ ಡಾ| ಮಾತಾ ಮಂಜಮ್ಮ ಜೋಗತಿಯವರು ಪ್ರಶಸ್ತಿ ಪ್ರಧಾನ ಮಾಡಿದರು. ಸ್ಥಳೀಯ ಶಾಸಕರು, ಮಾಜಿ ಸಚಿವರೂ ಆಗಿರುವ ವೆಂಕಟ ರಾವ್ ನಾಡಗೌಡ, ಅಕಾಡೆಮಿ ರಿಜಿಸ್ಟ್ರಾರ್ ಎನ್ ನಮೃತ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಇತರ ಜನಪದ ಕರಕುಶಲ ಕಲೆಯ ಲೋಹ ಶಿಲ್ಪದಲ್ಲಿ ಪರಿಣತರಾಗಿರುವ 78 ವರ್ಷದ ರಾಧಮ್ಮ ರಾಘವ ಆಚಾರ್ಯರವರು ಯಕ್ಷಗಾನದ ಗೆಜ್ಜೆ ತಯಾರಿಕೆಯಲ್ಲಿ ಪರಿಣತಿಯನ್ನು ಹೊಂದಿರುತ್ತಾರೆ. ಉಡುಪಿಯ ಕೌಶಲ ಲೋಹ ಶಿಲ್ಪ ಕಲಾಕೇಂದ್ರದ ಸ್ಥಾಪಕರಾಗಿರುತ್ತಾರೆ. ಈಗ ಲೋಹ ಶಿಲ್ಪಕಲೆಯಲ್ಲಿ ಮಗನಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

04/10/2022 04:51 pm

Cinque Terre

3.41 K

Cinque Terre

2

ಸಂಬಂಧಿತ ಸುದ್ದಿ