ಮುಲ್ಕಿ: ಶರನ್ನವರಾತ್ರಿ ಪ್ರಯುಕ್ತ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಡಾ.ಕಸ್ತೂರಿ ವಿವೇಕ್ ಬಂಗೇರ ರವರಿಂದ ಭಕ್ತಿ ಗಾನಸುಧೆ ಹಾಗೂ ಬೆಂಗಳೂರಿನ ನಾಟ್ಯಕಲಾಸಿರಿ ಸಾಂಸ್ಕೃತಿಕ ವೇದಿಕೆಯ ವಿದೂಷಿ ಮೋನಿಷಾ ಕೆಎಚ್ ರವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣಶೆಟ್ಟಿ, ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್, ಮತ್ತಿತರರು ಉಪಸ್ಥಿತರಿದ್ದರು.ಲಕ್ಷ್ಮಿಕಾಂತ್ ನಿರೂಪಿಸಿದರು.
Kshetra Samachara
03/10/2022 09:30 pm