ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಹಾತ್ಮಾ ಗಾಂಧೀಜಿ ಅಹಿಂಸೆ, ಶಾಸ್ತ್ರಿಜೀ ಸರಳತೆಯ ಪ್ರತಿರೂಪ

ಮಂಗಳೂರು: ಮಹಾತ್ಮಾ ಗಾಂಧೀಜಿ ಅವರು ಅಹಿಂಸೆಯ ಪ್ರತಿರೂಪವಾದರೆ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರಳತೆಯ ಪ್ರತಿರೂಪ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್ ಬಣ್ಣಿಸಿದರು.

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ ಅವರು, ಗಾಂಧಿಜೀಯವರು ಅಹಿಂಸೆಯನ್ನು ಪ್ರತಿಪಾದಿಸಿ, ಸಹೋದರತೆ, ಸಾಮರಸ್ಯ, ಸರ್ವಧರ್ಮ ಸಮಭಾವದಿಂದ ಈ ದೇಶಕ್ಕಾಗಿ ದುಡಿದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾತ್ಮರಾದರು. ಭಾರತ ಮಾತ್ರವಲ್ಲ, ಇಡೀ ಜಗತ್ತು ಗಾಂಧಿಜೀಯವರನ್ನು ಮಹಾತ್ಮ ಎಂದು ಒಪ್ಪಿಕೊಂಡಿದೆ ಎಂದು ಹೇಳಿದರು.

ದೇಶದ ಪ್ರಧಾನಿಯಾಗಿದ್ದರೂ ಶಾಸ್ತ್ರಿಯವರ ಬಳಿ ಸ್ವಂತ ಒಂದು ಕಾರು ಇರಲಿಲ್ಲ. ಅವರಿಗೆ ಅಧಿಕಾರ ದಾಹವೂ ಇರಲಿಲ್ಲ. ರೈಲು ಅವಘಡವೊಂದಕ್ಕೆ ಸಂಬಂಧಿಸಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು. ಇಂತಹ ನಾಯಕರೇ ನಮಗೆ ಮಾದರಿಯಾಗಬೇಕು ಎಂದು ಹೇಳಿದರು. ಗಾಂಧೀಜಿ ಮತ್ತು ಶಾಸ್ತ್ರಿಜೀ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಅವರು ಮುನ್ನಡೆಸಿದ ಪಕ್ಷದಲ್ಲಿ ನಾವು ಕೂಡ ಇದ್ದು ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಇಬ್ರಾಹಿಂ ಕೊಡಿಜಾಲ್ ಹೇಳಿದರು.

Edited By : Vijay Kumar
Kshetra Samachara

Kshetra Samachara

02/10/2022 07:29 pm

Cinque Terre

2.71 K

Cinque Terre

0