ಉಡುಪಿ: ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿರುವ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ದಾರೆ. ಕೇಸರಿ ಬಿಳಿ ಸಮವಸ್ತ್ರ ತೊಟ್ಟು ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಡಿಯಾಳಿ ಮಹಿಷಮರ್ದಿನಿ ದೇಗುಲದಿಂದ ಪ್ರಾರಂಭವಾದ ದುರ್ಗಾದೌಡ್ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಬಂತು. ಅಂದಾಜು ಏಳು ಸಾವಿರಕ್ಕಿಂತ ಹೆಚ್ಚು ಹಿಂದೂ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದು, ಮೆರವಣಿಗೆಯು ಕೃಷ್ಣಮಠದ ಸಮೀಪದ ರಾಜಾಂಗಣ ಪಾರ್ಕಿಂಗ್ ಪ್ಲೇಸ್‌ನಲ್ಲಿ ಸಮಾಪನಗೊಂಡಿತು.
ಇದೀಗ ಇಲ್ಲಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದ್ದು ಹಲವು ನಾಯಕರು ಭಾಷಣ ಮಾಡಲಿದ್ದಾರೆ. ಮಹಾರಾಷ್ಟ್ರದಲ್ಲಿ ನವರಾತ್ರಿ ಸಂದರ್ಭದಲ್ಲಿ ಪ್ರಚಲಿತದಲ್ಲಿರುವ ದುರ್ಗಾದೌಡ್ ಕಾರ್ಯಕ್ರಮವನ್ನು ಉಡುಪಿಯಲ್ಲಿ ಎರಡು ವರ್ಷಗಳಿಂದ ಆಯೋಜಿಸಲಾಗುತ್ತಿದೆ.
Kshetra Samachara
02/10/2022 06:05 pm