ಮುಲ್ಕಿ: ಸೈಕ್ಲಿಂಗ್ ಮೂಲಕ ವಿವಿಧ ರಾಜ್ಯಗಳನ್ನು ಸುತ್ತಿ ಇದೀಗ ಮಂಗಳೂರಿನಿಂದ ಕಾಶ್ಮೀರಕ್ಕೆ ಸೈಕಲ್ ಮೂಲಕ ಒಂದು ತಿಂಗಳ ಕಾಲ ಮೂರು ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ಸಂಚರಿಸಲಿರುವ ಶ್ರೀನಿಧಿ ಶೆಟ್ಟಿ ಕಿಲೆಂಜೂರು ಮತ್ತು ಜಗದೀಶ್ ಕುಲಾಲ್ ಅವರನ್ನು ಕಿನ್ನಿಗೋಳಿ ಪರಿಸರದ ಅತ್ತೂರುಮಾಗಣೆ ಗ್ರಾಮಸ್ಥರು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತಿಸಿದರು.
ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಶ್ರೀ ನಿಧಿಯವರಿಗೆ ಕರೆ ಮಾಡಿ ಶುಭಕೋರಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀನಿಧಿ ಶೆಟ್ಟಿ, ಮಂಗಳೂರಿನಿಂದ ಕಾಶ್ಮೀರಕ್ಕೆ ಸೈಕ್ಲಿಂಗ್ ಮೂಲಕ ಪ್ರಯಾಣಿಸಿ ಮಂಗಳೂರಿನಲ್ಲಿ ತುಳುವನ್ನು ಬೆಳೆಸಿ ತುಳುವನ್ನು ಉಳಿಸಿ ಅಭಿಯಾನದೊಂದಿಗೆ ಅಂಗಾಂಗ ದಾನ, ದುಶ್ಚಟಗಳ ಬಗ್ಗೆ ಅರಿವು ಮೂಡಿಸಲು ಸಾಮಾಜಿಕ ಕಳಕಳಿಯೊಂದಿಗೆ ಸೈಕ್ಲಿಂಗ್ ಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು. ಸೈಕ್ಲಿಂಗ್ ಯಾತ್ರೆಗೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿದ್ದು ಎಲ್ಲರ ಸಹಕಾರ ಕೋರಿದರು.
Kshetra Samachara
02/10/2022 03:43 pm