ಮುಲ್ಕಿ: ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಬಪ್ಪನಾಡು ಶ್ರೀ ದೇವಸ್ಥಾನದಲ್ಲಿ ಖ್ಯಾತ ಗಾಯಕ ಎಂಎಸ್ ಗಿರಿಧರ್ ಮತ್ತು ವಸುದಾ ಜಿ ಬೆಂಗಳೂರು ರವರಿಂದ ದಾಸ ಸಿಂಚನ ಹಾಗೂ ಕುಳಾಯಿ ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ನೃತ್ಯ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ಹಾಗೂ ಶಿಷ್ಯ ವೃಂದದವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ನೃತ್ಯ ಸಂಭ್ರಮ ನಡೆಯಿತು.
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಕಾರ್ಯನಿರ್ವಹಣಾಧಿಕಾರಿ, ಜಯಮ್ಮ,ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/10/2022 07:38 pm