ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ,) ಕಡಿಯಾಳಿಯ ಮಹಿಳಾ ಸದಸ್ಯರ ನೇತೃತ್ವದಲ್ಲಿ 5ನೇ ವರ್ಷದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಉಡುಪಿ ದಾಂಡಿಯ ನೃತ್ಯ 2022 ಕಾರ್ಯಕ್ರಮವು ಉಡುಪಿ ಕಡಿಯಾಳಿ ಕಮಲಾಬಾಯಿ ಪ್ರೌಢಶಾಲಾ ಮೈದಾನದಲ್ಲಿ ಅಕ್ಟೋಬರ್ 1 ಶನಿವಾರ ಜರಗಲಿದೆ. ಸಂಜೆ 5.30 ಕ್ಕೆ ಆರಂಭಗೊಂಡು ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಗುಜರಾತಿನಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ಸಾಂಪ್ರದಾಯಿಕ ನೃತ್ಯವಿದು. ಇಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪುರುಷರು, ಮಹಿಳೆಯರು, ಜೋಡಿ ಸಾಂಪ್ರದಾಯಿಕ ನೃತ್ಯಕ್ಕೆ ಅವಕಾಶ ಇದ್ದು ಸಾರ್ವಜನಿಕರಿಗೆ ಮುಕ್ತ ಅವಕಾಶ. ಅತ್ಯುತ್ತಮ ನೃತ್ಯಕ್ಕೆ ಹಾಗೂ ಅತ್ಯುತ್ತಮ ಉಡುಗೆ ತೊಡುಗೆಗೆ ಬಹುಮಾನವಿದೆ.ಅಲ್ಲದೆ ವಿಶೇಷ ಆಹಾರಮೇಳ ಕೂಡ ನಡೆಯಲಿದೆ. ಸಂಪೂರ್ಣ ಮೈದಾನವನ್ನು ರಂಗು ರಂಗಿನ ಬಣ್ಣದ ಆಕರ್ಷಕ ಪೆಂಡಾಲ್ ನಿರ್ಮಾಣಗೊಳ್ಳಲಿದೆ .ಸುಮಾರು 3 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ತಿಳಿಸಿದರು.
Kshetra Samachara
30/09/2022 04:42 pm