ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನವರಾತ್ರಿ ಪ್ರಯುಕ್ತ ಕಡಿಯಾಳಿ ದೇಗುಲಕ್ಕೆ ಪೇಜಾವರ ಶ್ರೀ ಭೇಟಿ

ಉಡುಪಿ: ಉಡುಪಿ. ಶರನ್ನವರಾತ್ರಿ ಮೂರನೇ ದಿನ ವೈಭವದಿಂದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಅಯೋಧ್ಯೆ ಶ್ರೀ ರಾಮ ಮಂದಿರದ ಟ್ರಸ್ಟಿ ಮತ್ತು ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಶ್ರೀ ಮಹಿಷಮರ್ಧಿನಿ ದೇವರ ದರುಶನ ಮಾಡಿದರು.

ತದನಂತರ ನೂತನ ನಿರ್ಮಾಣಗೊಂಡ ಯಾಗ ಶಾಲೆ, ಮತ್ತು ಬಡವರಿಗೆ ಉಚಿತವಾಗಿ ನೀಡುವ ಶರ್ವಾಣಿ ಕಲ್ಯಾಣ ಮಂಟಪವನ್ನು ವೀಕ್ಷಿಸಿ ದೇಗುಲದ ಸೌಂದರ್ಯ, ಸುಸಜ್ಜಿತ ವ್ಯವಸ್ಥೆ, ಸ್ವಚ್ಛತೆಗಳನ್ನು ಕಂಡು ಮೆಚ್ಚುಗೆಯ ಮಾತುಗಳನ್ನಾಡಿದರುಈ ಸಂದರ್ಭದಲ್ಲಿ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಡಾ.ಕಟ್ಟೆ ರವಿರಾಜ್ ಆಚಾರ್ಯ, ದೇಗುಲದ ಪವಿತ್ರ ಪಾಣಿ ಕುಂಜಿತಾಯ ಶ್ರೀನಿವಾಸ ಉಪಾಧ್ಯ ,ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಶ್ರೀ ಮಂಜುನಾಥ ಹೆಬ್ಬಾರ್, ಶ್ರೀಮತಿ ಶಶಿಕಲಾ ಭರತ್ ,ಶ್ರೀಮತಿ ಸಂಧ್ಯಾಪ್ರಭು, ಬಿಗ್ ಬಾಸ್ ಖ್ಯಾತಿಯ ಅರವಿಂದ ಕೆ.ಪಿ ದೇಗುಲದ ಅರ್ಚಕ ಕೆ.ರಾಧಾಕೃಷ್ಣ ಉಪಾಧ್ಯ ದಾಮೋದರ್ ರಾವ್ ಕಡಿಯಾಳಿ*ದೇಗುಲದ ಅರ್ಚಕರು ಸಿಬ್ಬಂದಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/09/2022 04:25 pm

Cinque Terre

2.64 K

Cinque Terre

0

ಸಂಬಂಧಿತ ಸುದ್ದಿ