ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಪ್ರದೇಶವಾದ ತಲಪಾಡಿ ಸಮೀಪದ ಕೆಸಿ ರೋಡ್ ಬಳಿ ತ್ಯಾಜ್ಯದ ರಾಶಿ ಬಿದ್ದುಕೊಂಡಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದು ದನ ಕರುಗಳು ಪ್ಲಾಸ್ಟಿಕ್ ತ್ಯಾಜ್ಯ ತಿನ್ನುವ ದೃಶ್ಯ ಕಾಣಿಸುತ್ತಿದ್ದು ರೋಗದ ಭೀತಿ ಎದುರಾಗಿದೆ.
ತ್ಯಾಜ್ಯದ ರಾಶಿಯ ಬದಿಯಲ್ಲಿ ಸೋಮೇಶ್ವರ ಪುರಸಭೆಯ ಸ್ವಚ್ಛತೆಯ ನಾಮಫಲಕ ಇದ್ದರೂ ದುಷ್ಕರ್ಮಿಗಳು ತ್ಯಾಜ್ಯ ಬಿಸಾಡುತ್ತಿದ್ದು ಸ್ಥಳದಲ್ಲಿ ಸೂಕ್ತ ಸಿಸಿ ಕ್ಯಾಮೆರಾ ಅಳವಡಿಸಿ ತ್ಯಾಜ್ಯ ಬಿಸಾಡುವುದನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ.
Kshetra Samachara
25/09/2022 06:18 pm