ಕಟೀಲು : ಎನ್ ಎಸ್ ಎಸ್ ದಿನಾಚರಣೆಯ ದಿನದಂದು ಕಟೀಲು ಶ್ರೀ ದು.ಪ.ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಸೇವಾ ಎರಡು ಘಟಕಗಳ ಸೇವಾ ಚಟುವಟಿಕೆಗಳನ್ನು ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ ಉದ್ಘಾಟಿಸಿದರು.
ಹೆತ್ತವರನ್ನು ಹಿರಿಯರನ್ನು ಗೌರವಿಸುವುದೇ ಅತ್ಯುತ್ತಮವಾದ ಸೇವೆ ಎಂದು ಅವರು ಹೇಳಿದರು.
ಸಮಾಜ ಸೇವಕ ಪ್ರಕಾಶ ಆಚಾರ್ ಮಾತನಾಡಿ ಪ್ರಚಾರಕ್ಕಾಗಿ ಸಮಾಜ ಸೇವೆ ಮಾಡಬಾರದು. ನೈಜ ಸೇವೆಯಿಂದ ಹೆಸರು, ಸಹಕಾರ ತನ್ನಿಂದತಾನೆ ಬರುತ್ತದೆ. ಪರಿಚಯ ಸ್ನೇಹ ಹೆಚ್ಚಾಗುತ್ತದೆ. ನಾಯಕತ್ವದ ಗುಣ ಬೆಳೆಯುತ್ತದೆ ಎಂದರು. ಕಾಲೇಜಿನ ಡಾ. ಕೃಷ್ಣ, ಎನ್ ಎಸ್ ಎಸ್ ಅಧಿಕಾರಿಗಳಾದ ಡಾ. ಪರಮೇಶ್ವರ್, ಸಂತೋಷ್ ಆಳ್ವ, ರೆಡ್ ಕ್ರಾಸ್ ನ ಡಾ. ವಿಜಯ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
Kshetra Samachara
24/09/2022 08:46 pm