ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: 24ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ, ಭಜನೋತ್ಸವ ಸಮಾವೇಶ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನೇತೃತ್ವದಲ್ಲಿ ಒಂದು ವಾರಗಳ ಕಾಲ ನಡೆದ 24ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭ ಹಾಗೂ ಭಜನೋತ್ಸವ ಸಮಾವೇಶ ಶುಕ್ರವಾರ ಧರ್ಮಸ್ಥಳದಲ್ಲಿ ನಡೆಯಿತು. ಮೆರವಣಿಗೆ ಮೂಲಕ ಅತಿಥಿಗಳನ್ನು ಅಮೃತವರ್ಷಿಣಿ ಸಭಾಭವನಕ್ಕೆ ಕರೆತರಲಾಯ್ತು. ಮೂರು ಬಾರಿ ಓಂಕಾರ, ಜೈಕಾರ, ಕುಳಿತು ಭಜನೆ ಮಾಡುವ ಮೂಲಕ ಸಮಾರಂಭ ಆರಂಭವಾಯ್ತು.

ಇದೇ ವೇಳೆ ಮಾತೃಶ್ರೀ ಡಾ.ಹೇಮಾವತಿ ಅಮ್ಮನವ್ರ ಪರಿಕಲ್ಪನೆಯಲ್ಲಿ ವಿದುಷಿ ಚೈತ್ರಾ‌ ಮತ್ತು ತಂಡದಿಂದ ದೃಶ್ಯ ರೂಪಕ ನಡೆಯ್ತು. ಕಮ್ಮಟದ ಸಂಚಾಲಕ‌ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಇದೇ ವೇಳೆ ಅಭ್ಯಾಗತರಿಗೆ ಗೌರವ ಅರ್ಪಣೆ ಮಾಡಲಾಯಿತು. ಭಜನಾ ಕಮ್ಮಟದ ಕಾರ್ಯದರ್ಶಿ ಸುರೇಶ್ ಮ್ಯೋಲಿ ವರದಿ ಮಂಡಿಸಿದ್ರು. ಇದೇ ವೇಳೆ ಭಜನಾ ಪರಿಷತ್‌ನ ಸಾಧಕರಿಗೆ ಸನ್ಮಾನ ಮಾಡಲಾಯ್ತು. ಪೇಜಾವರಶ್ರೀಗಳಿಗೆ, ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಕ್ಷೇತ್ರದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯ್ತು. ಇದೇ ವೇಳೆ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ವಿ.ಹೆಗ್ಗಡೆಯವರಿಗೆ ಸನ್ಮಾನ ಮಾಡಲಾಯ್ತು. ಇದೇ ವೇಳೆ ನೃತ್ಯ ಭಜನಾ ಪ್ರಾತ್ಯಕ್ಷಿಕೆ, ಸಾಮೂಹಿಕ ಕುಣಿತ ಭಜನಾ ಪ್ರದರ್ಶನ ನಡೆಯ್ತು. ವಿವಿಧ ಜಿಲ್ಲೆಗಳಿಂದ ಶಿಬಿರಾರ್ಥಿಗಳು ಆಗಮಿಸಿದ್ರು.

Edited By :
Kshetra Samachara

Kshetra Samachara

23/09/2022 02:53 pm

Cinque Terre

4.16 K

Cinque Terre

0