ಬುಡುಪಿ: ಬಿಜೆಪಿ ಉಡುಪಿ ನಗರ ವತಿಯಿಂದ 'ಸೇವಾ ಪಾಕ್ಷಿಕ' ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೆ.20 ಮಂಗಳವಾರ ಸಂಜೆ 4.30ಕ್ಕೆ ಉಡುಪಿ ಕ್ಲಾಕ್ ಟವರ್ ಬಳಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಧಾನಿ ಮೋದಿ ಜೀವನ, ದೂರದೃಷ್ಟಿ ಮತ್ತು ನೀತಿಗಳನ್ನು ಪ್ರಚುರಪಡಿಸುವ ಬೃಹತ್ ಎಲ್.ಇ.ಡಿ. ಪ್ರದರ್ಶಿನಿ 'ಮೋದಿ ಪಥ' ಹಾಗೂ 'ಬೀದಿ ನೃತ್ಯ' (ಫ್ಲ್ಯಾಶ್ ಮೋಬ್) ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಡೆಯಲಿದೆ.
ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ನಡೆಯಲಿರುವ ಈ ವಿನೂತನ ಕಾರ್ಯಕ್ರಮಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಲಿದ್ದಾರೆ.ಬಳಿಕ ಸಂಜೆ 5.30ಕ್ಕೆ ರಾಜಾಂಗಣದ ಪಾರ್ಕಿಂಗ್, 6.30ಕ್ಕೆ ಮಲ್ಪೆ ಬೀಚ್, 7.30ಕ್ಕೆ ಸಂತೆಕಟ್ಟೆ ಜಂಕ್ಷನ್, 8.30ಕ್ಕೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಪ್ರದರ್ಶಿನಿ ಹಾಗೂ ಬೀದಿ ನೃತ್ಯ ನಡೆಯಲಿದೆ.
ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು, ಯುವ ಸಮುದಾಯ, ಮೋದಿ ಅಭಿಮಾನಿಗಳು ಮತ್ತು ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅಭೂತಪೂರ್ವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ 'ಸೇವಾ ಪಾಕ್ಷಿಕ' ಅಭಿಯಾನದ ಜಿಲ್ಲಾ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
19/09/2022 05:19 pm