ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : 'ಹಳೆಯ ಕನ್ನಡ ಶಾಲೆಗಳು ದೇವಸ್ಥಾನಗಳಿದ್ದಂತೆ ಉಳಿಸಿ ಬೆಳೆಸಬೇಕು'

ಬ್ರಹ್ಮಾವರ : ಬಾರಕೂರು ವಿದ್ಯಾಭಿವರ್ಧಿನಿ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ, ನ್ಯಾಶನಲ್ ಪದವಿ ಪೂರ್ವ ಕಾಲೇಜು ಹಾಗೂ ಅಮೃತಮಹೋತ್ಸವ ಸಮಿತಿ ಇವರ ಆಶ್ರಯದಲ್ಲಿ ಶನಿವಾರ ಜರುಗಿದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಮತ್ತು ಹಾಲಿ ಶಿಕ್ಷಕರ ಸನ್ಮಾನ ಗುರು ವಂದನೆ ಕಾರ್ಯಕ್ರಮ ಜರುಗಿತು.

ಈ ವೇಳೆ ಹಳೆ ವಿದ್ಯಾರ್ಥಿ ಬೆಂಗಳೂರು ವಿವೇಕಾನಂದ ಇಂಟರ್ ನ್ಯಾಷನಲ್ ಪಬ್ಲಿಕ್ ಹೈಸ್ಕೂಲ್ ಪ್ರಿನ್ಸಿಪಾಲ್ ಸಾಕಮ್ಮ ಶೆಟ್ಟಿಯವರು ಮಾತನಾಡಿ, 75 ನೇ ವರ್ಷದ ಈ ಶಿಕ್ಷಣ ಸಂಸ್ಥೆ ಹಳೆಯದಾದರೂ ಹಳೆಯ ದೇವಸ್ಥಾನದಂತೆ ಶಕ್ತಿಶಾಲಿಯಾಗಿರುತ್ತದೆ . ಸೂಕ್ತ ಸಮಯದಲ್ಲಿ ಕಲೆ ನೀಡುವ ಬ್ರಹ್ಮಕಲಶ ಮಾಡುವಂತೆ ಹಳೆ ವಿದ್ಯಾರ್ಥಿಗಳು ಸೇರಿ ಉಳಿಸುವ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಬಾರಕೂರು ವಿದ್ಯಾಭಿವರ್ಧಿನಿ ಸಂಘದ ಆಡಳಿತಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಯ ನಿವೃತ್ತ ಶಿಕ್ಷಕರನ್ನು ಹಾಲಿ ಶಿಕ್ಷಕರನ್ನು ಗೌರವಿಸಲಾಯಿತು. ಉಡುಪಿ ಎಂ.ಜಿ.ಎಂ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಎಲ್. ಎಂ. ಸಾಮಗ, ಶಿಕ್ಷಣ ಸಂಸ್ಥೆಯ ಆಡಳಿತ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

18/09/2022 04:33 pm

Cinque Terre

15.26 K

Cinque Terre

0

ಸಂಬಂಧಿತ ಸುದ್ದಿ