ಮುಲ್ಕಿ: ಸರ್ವರಲ್ಲಿ ಸಾಮರಸ್ಯ ಏಕತೆ ಅನ್ಯೋನ್ಯತೆ ಹಾಗೂ ಅಭಿವೃದ್ಧಿಯನ್ನು ಗುರು ದೇವರು ಅನುಗ್ರಹಿಸಿ ಗುರು ತತ್ವ ಜೀವನದ ಸತ್ವವಾಗಿ ಬೆಳಗಲಿ ಎಂದು ಉದ್ಯಮಿ ಭಾಸ್ಕರ ಸಾಲ್ಯಾನ್ ಹೇಳಿದರು.
ಹಳೆಯಂಗಡಿ ಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರೀ ನಾರಾಯಣ ಗುರುಗಳ 168ನೇ ಜನ್ಮ ಜಯಂತಿಯ ಪ್ರಯುಕ್ತ ಭಜನಾ ಸಂಕೀರ್ಥನೆಯ ಸಂದರ್ಭ ಮಾತನಾಡಿದರು. ಉದ್ಯಮಿ ಪ್ರವೀಣ್ ಕುಮಾರ್ ಕೊಳುವೈಲು ಭಜನಾ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ ಬಂಗೇರ, ಅಧ್ಯಕ್ಷ ಚಂದ್ರಶೇಖರ ನಾಣಿಲ್, ಪ್ರಧಾನ ಕಾರ್ಯದರ್ಶಿ ಹಿಮಕರ ಟಿ ಸುವರ್ಣ ಕಲ್ಲಾಡಿ, ಕೋಶಾಧಿಕಾರಿ ರಮೇಶ ಬಂಗೇರ, ಉಪಾಧ್ಯಕ್ಷರಾದ ಜಯ.ಜಿ ಸುವರ್ಣ, ಜೈಕೃಷ್ಣ ಕೋಟ್ಯಾನ್, ಜೊತೆ ಕಾರ್ಯದರ್ಶಿಗಳಾದ ಹೊನ್ನಯ್ಯ ಕೆ, ದೀಪಕ್ ನಾಣಿಲ್,ಶರತ್ ಕುಮಾರ್ ,ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್ ಸುವರ್ಣ, ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್, ಕೋಶಾಧಿಕಾರಿ ಯಶೋಧರ್ ಎಸ್ ಸಾಲ್ಯಾನ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು
Kshetra Samachara
10/09/2022 10:23 pm