ಮುಲ್ಕಿ: ಶಾಂಭವಿ ಜೂನಿಯರ್ ಚೇಂಬರ್ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಕಾರ್ನಾಡ್ ಯಂಗ್ ಸ್ಟಾರ್ ಅಸೋಸಿಯೇಷನ್ ಹಾಗೂ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಲೇಡಿಗೋಷನ್ ಮಂಗಳೂರು ಸoಯುಕ್ತ ಆಶ್ರಯದಲ್ಲಿ ಬಪ್ಪನಾಡಿನ ಮಾತ ಪಂಚ ದುರ್ಗ ರೆಸಿಡೆನ್ಸಿಯಲ್ಲಿ ರಕ್ತದಾನ ಶಿಬಿರವು ಜರಗಿತು 43 ಯೂನಿಟ್ ರಕ್ತಸಂಗ್ರಾಹಗೊಳಿಸಲಾಯಿತು.
ಕಾರ್ಯಕ್ರಮವನ್ನು ಸತ್ಯೇಂದ್ರ ಶೆಣೈ ಉದ್ಘಾಟಿಸಿ ಮಾತನಾಡಿ ರಕ್ತದಾನ ಶ್ರೇಷ್ಠದಾನವಾಗಿದ್ದು ಇನ್ನೊಬ್ಬರ ಜೀವ ಉಳಿಸುವ ಕರ್ತವ್ಯ ಶ್ಲಾಘನೀಯ ಎಂದರು.
ಮುಲ್ಕಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾದ ಮದುಕರ್ ಎಂ, ಬಪ್ಪ ನಾಡು ಇನ್ಸ್ಪೈರ್ ಸ್ಥಾಪಕ ಅಧ್ಯಕ್ಷ ಲ ವೆಂಕಟೇಶ ಹೆಬ್ಬಾರ್, ಜೆಸಿಐ ಅಧ್ಯಕ್ಷ ಕಲ್ಲಪ್ಪ ತಡವಳಗ, ದಿನೇಶ್ ಕೆ ಶೆಟ್ಟಿ, ವಿಶ್ವನಾಥ್ ಶೆಣೈ ಅಶೋಕ್ ಶೆಟ್ಟಿ ಪ್ರವೀಣ ಆನಂದ್ ಮತ್ತಿತರರು ಉಸ್ಥಿತರಿದ್ದರು.
Kshetra Samachara
10/09/2022 04:14 pm