ಬ್ರಹ್ಮಾವರ : ಕ್ರೈಸ್ತ ಬಾಂಧವರಿಗೆ ಕನ್ಯಾಮರಿಯಮ್ಮನವರ ಜನ್ಮ ದಿನ ಮತ್ತು ಪ್ರಕೃತಿಯ ಫಸಲನ್ನು ಚರ್ಚ್ ನಲ್ಲಿ ಪೂಜಿಸಿ ಹೊಸ ತೆನೆಯನ್ನು ಮನೆಗೆ ಕೊಂಡು ಹೋಗುವ ಸಂಭ್ರಮದ ಹಬ್ಬ.
ಬಾರಕೂರು ಸೈಂಟ್ ಪೀಠರ್ ಚರ್ಚ್‌ನಲ್ಲಿ ಇಂದು ಇಲ್ಲಿನ ಧರ್ಮಗುರು ಪೀಲೀಪ್ ನೇರಿ ಅರಾನ್ಹಾ ಇವರಿಂದ ತೆನೆ ಪೂಜೆ ಪ್ರಾರ್ಥನೆ ಜರುಗಿತು. ಈ ಸಂದರ್ಭ ನೂರಾರು ಕ್ರೈಸ್ತ ಬಾಂಧವರಿದ ಸಾಮೂಹಿಕ ಪ್ರಾರ್ಥನೆ ಸಂಗೀತದೊಂದಿಗೆ ಪೂಜಾ ಕಾರ್ಯದ ಬಳಿಕ ಧರ್ಮಗುರುಗಳು ಸ್ಥಳೀಯ ವಾರ್ಡಿನ ಮುಖ್ಯಸ್ಥರಿಗೆ, ಪಾಲನಾ ಮಂಡಳಿಯವರಿಗೆ ಮತ್ತು ಆಗಮಿಸಿದ ಎಲ್ಲರಿಗೂ ತೆನೆಯನ್ನು ಜೊತೆಗೆ ಸಿಹಿಯಾದ ಕಬ್ಬನ್ನು ನೀಡಿದರು.
Kshetra Samachara
08/09/2022 04:46 pm