ಉಡುಪಿ: ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಅಲೆವೂರು ಇಲ್ಲಿನ ವಿದ್ಯಾರ್ಥಿನಿಯರು ಬಿದ್ಕಲ್‌ಕಟ್ಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ್ ಶಾಲಾ ಕಬಡ್ಡಿ ಪಂದ್ಯಾಟದ ಅಂಡರ್ 14 ವಿಭಾಗದಲ್ಲಿ ಪ್ರಥಮ ಬಹುಮಾನ ಗೆದ್ದಿದ್ದಾರೆ. ತಂಡದಲ್ಲಿ ಸಂಜನಾ, ಗ್ರೀಷ್ಮಾ, ನಿಯತಿ, ಕೀರ್ತನಾ ನಾಯ್ಕ್, ತನ್ವಿ ಎಸ್. ಅಂಚನ್, ಮನಸ್ವಿನಿ ನಾಯಕ್, ರಮ್ಯಾ, ಕೀರ್ತನಾ ಶೇರಿಗಾರ್, ಅನ್ವಿತಾ ನಾಯ್ಕ್, ಚಿನ್ಮಯಿ ಪಿ. ಶೆಟ್ಟಿ, ಸಿಂಚನಾ ಎಸ್. ಭಂಡಾರಿ ಹಾಗೂ ರಶ್ವಿತಾ ಇದ್ದರು. ವಿಜೇತ ತಂಡದ ಸದಸ್ಯರು ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ವಿಜೇತ ತಂಡವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ, ಸಂಚಾಲಕ ಅಲೆವೂರು ದಿನೇಶ್ ಕಿಣಿ ಅಭಿನಂದಿಸಿದ್ದಾರೆ.
Kshetra Samachara
08/09/2022 04:10 pm