ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಕ್ಕಳನ್ನು ಮಿತ್ರರಂತೆ ಕಾಣಬೇಕು: ಡಾ. ವಿರೂಪಾಕ್ಷ ದೇವರಮನೆ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ರಕ್ಷಕ ಶಿಕ್ಷಕ ಸಮಾವೇಶ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎ.ವಿ ಬಾಳಿಗಾ ಆಸ್ಪತ್ರೆ ದೊಡ್ಡಣಗುಡ್ಡೆ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಮೊಬೈಲ್, ಕಂಪ್ಯೂಟರ್, ವಾಹನ, ಸಹಪಾಠಿಗಳು, ಇಂತಹ ಪರಿಸರಗಳ ಮಧ್ಯದಲ್ಲಿ ವಿದ್ಯಾರ್ಥಿಗಳ ಗುರಿ ಮಂಕಾಗುವ ಸಾಧ್ಯತೆಗಳೇ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಗೆಳೆಯರಂತೆ ಕಂಡು ಅಕ್ಕರೆ ತೋರಿ, ಮನೆಯಲ್ಲಿ ಉತ್ತಮ ವಾತಾವರಣವನ್ನು ನೀಡಿ ಮಕ್ಕಳ ಮನಸ್ಸು ಹಾಗೂ ದೈಹಿಕವಾಗಿ ಸರಿದಾರಿಯಲ್ಲಿ ನಡೆಯುವಂತೆ ಮಾಡಿದಲ್ಲಿ, ಉತ್ತಮ ಜನಾಂಗವನ್ನು ನಿರೀಕ್ಷಿಸಬಹುದು ಎಂದರು.

ಎಂ. ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಲಹಾ ಸಮಿತಿಯ ಸದಸ್ಯರೂ ಆದ ಪ್ರೊ. ಎಂ.ಎಲ್.ಸಾಮಗ ಉದ್ಘಾಟಿಸಿ ಶುಭ ಹಾರೈಸಿದರು.ಪ್ರಾಂಶುಪಾಲ ಡಾ.ಸುರೇಶ್ ರೈಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ ಎ.ಸಿ.ಸಂಚಾಲಕ ಡಾ. ಮೇವಿ ಮಿರಾಂದ, 2021-22ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೆ.ಶಿವಾನಂದ ವೈದ್ಯ ಉಪಸ್ಥಿತರಿದ್ದರು.

2022-23ನೇ ಸಾಲಿಗೆ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸುಜಾತ, ಉಪಾಧ್ಯಕ್ಷರಾಗಿ ಕಮಲಾಕ್ಷ ಶೇಟ್, ಜಂಟಿ ಕಾರ್ಯದರ್ಶಿಯಾಗಿ ಶಾಲಿನಿ ಆಯ್ಕೆಯಾದರು.ಶಿಕ್ಷಕ-ರಕ್ಷಕ ಸಂಘದ ಸಂಚಾಲಕ ಡಾ.ಗೋಪಾಲಕೃಷ್ಣ ಎಂ. ಸ್ವಾಗತಿಸಿ ಪ್ರಸ್ತಾವಿಸಿದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಸುಷ್ಮಾ ಟಿ. ಪ್ರಾರ್ಥಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕ ಡಾ.ಉದಯ ಶೆಟ್ಟಿ ಕೆ. ನಿರೂಪಿಸಿದರು. ಉಮೇಶ್ ಪೈ ವಂದಿಸಿದರು.

Edited By : Nagaraj Tulugeri
Kshetra Samachara

Kshetra Samachara

02/09/2022 10:39 pm

Cinque Terre

9.39 K

Cinque Terre

0

ಸಂಬಂಧಿತ ಸುದ್ದಿ