ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: "ಯುವಜನರು ವಿದ್ಯಾರ್ಥಿ ಜೀವನದಲ್ಲೇ ಉತ್ತಮ‌ ಗುರಿ ಹೊಂದಿರಬೇಕು"

ಬ್ರಹ್ಮಾವರ: ಯುವಜನರನ್ನು ಒಂದುಗೂಡಿಸಲು ಶ್ರೀ ಗಣೇಶೋತ್ಸವದಂತಹ ಕಾರ್ಯಕ್ರಮಗಳಿಂದ ಸಾಧ್ಯವಿದೆ. ವಿದ್ಯಾರ್ಥಿ ಜೀವನದಲ್ಲೇ ಪ್ರತಿ ವಿದ್ಯಾರ್ಥಿಯೂ ಮುಂದೆ ತಾನೇನಾಗಬೇಕು ಎಂಬುದನ್ನು ತೀರ್ಮಾನಿಸಬೇಕು. ವಿದ್ಯೆ ನಂತರ ಯಾವುದೇ ಕೆಲಸವಾದರೂ ಆಗಬಹುದು ಎಂಬ ಧೋರಣೆಯಿಂದ ಹೊರ ಬರಬೇಕು. ಆಗ ಮಾತ್ರ ಯುವ ಜನತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ಸ್ಫೂರ್ತಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನೇತೃತ್ವದಲ್ಲಿ 10ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಎಂಎಂ ಪ್ರೌಢಶಾಲಾ ರಂಗ ಮಂಟಪದಲ್ಲಿ ಧಾರ್ಮಿಕ ಸಭೆ ಜರುಗಿತು. ಇದೇ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಸೇರಿದಂತೆ ನಿಕಟಪೂರ್ವ ಸಮಿತಿಯ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Edited By : Nagesh Gaonkar
Kshetra Samachara

Kshetra Samachara

02/09/2022 03:09 pm

Cinque Terre

4.92 K

Cinque Terre

0

ಸಂಬಂಧಿತ ಸುದ್ದಿ