ಕುಂದಾಪುರ: ಕುಂದಾಪುರದ ಬಂಟರು ದೇಶ ವಿದೇಶಗಳಲ್ಲಿ ಇದ್ದಾರೆ. ಅಲ್ಲಿ ಅವರು ಒಟ್ಟಾಗುತ್ತಾರೆ. ಆದರೆ ಮೂಲನೆಲ ಕುಂದಾಪುರದಲ್ಲಿಯೇ ಒಟ್ಟಾಗುತ್ತಿಲ್ಲ ಎಂದು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬೈ ಇದರ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಕುಂದಾಪುರದಲ್ಲಿ ಭಾನುವಾರ ನಡೆದ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ 2022ರ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಅವರು, 'ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಂಟರ ಸಂಘ ಇದೆ. ಆದರೆ ಅದನ್ನು ಮೀರಿಸಿ ಕುಂದಾಪುರದ ಯುವ ಬಂಟರ ಸಂಘ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿಯಾಗಿದೆ' ಎಂದರು.
ಇದೇ ಸಂದರ್ಭ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು. ಐಕಳ ಹರೀಶ್ ಶೆಟ್ಟಿ ಶುಭಾಶಂಸನೆಗೈದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಜಯಕರ ಶೆಟ್ಟಿ ಎಂ., ದಿಕ್ಸೂಚಿ ಭಾಷಣ ಮಾಡಿದರು.
Kshetra Samachara
28/08/2022 09:53 pm