ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಮೃತ ಮಹೋತ್ಸವ ಸಮಿತಿ ಹಾಗೂ ಪದ್ಮಶಾಲಿ ಮಹಾಸಭಾ (ರಿ) ವತಿಯಿಂದ ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡು ಜಿಲ್ಲೆ ವ್ಯಾಪ್ತಿಯ ಸಮಾಜ ಬಾಂಧವರ ಅಮೃತ ಸಂಭ್ರಮ 2022 ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ ಮಹಿಳಾ ಸಮಾವೇಶ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಪದ್ಮಶಾಲಿ ಮಹಾಸಭಾ(ರಿ) ಉಪಾಧ್ಯಕ್ಷೆ ಲಲಿತಾ ಸತೀಶ್ ಶೆಟ್ಟಿಗಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವೆ ಚಲನಚಿತ್ರ ನಟಿ ಉಮಾಶ್ರೀ ಮಾತನಾಡಿ ಮಹಿಳೆಯರು ಸಂಘಟಿತರಾಗಿ ಸವಲತ್ತುಗಳನ್ನು ಪಡೆದುಕೊಂಡರೆ ಸಮುದಾಯ ಉಳಿದುಕೊಳ್ಳಲು ಸಾಧ್ಯ, ಇದಕ್ಕಾಗಿ ಮಹಿಳೆಯರು ಆತ್ಮಸ್ಥೈರ್ಯ, ಮುನ್ನುಗ್ಗುವ ಛಲ, ಭದ್ರತೆ, ಸಂಸಾರದಲ್ಲಿ ನಂಬಿಕೆ ಬೇಕಾಗಿದೆ. ಮಹಿಳೆಯರ ಸಾಧನೆ ಹಿಂದೆ ಪುರುಷರ ಸಹಾಯ ಅಗತ್ಯವಾಗಿದೆ. ಮಹಿಳೆಯರಿಗೆ ಭಿಕ್ಷೆ ಬೇಕಿಲ್ಲ, ಸಮಾನತೆ ಬೇಕು ಎಂದರು
ವೇದಿಕೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್ ಕುಂದರ್, ಮುಂಬೈ ಪದ್ಮಶಾಲಿ ಸಮಾಜ ಸೇವಾ ಸಂಘದ ಸರೋಜಿನಿ ಎಚ್ ಶೆಟ್ಟಿಗಾರ್, ಭಾನುಮತಿ ಡಿ ಶೆಟ್ಟಿಗಾರ್, ಕೀರ್ತಿ ಕುಮಾರಿ, ಡಾ. ವಸುಂಧರಾ ದೇವಿ ಮಣಿಪಾಲ, ಆರತಿ ವಿಶ್ವನಾಥ, ಹರಿಣಾಕ್ಷಿ ಶ್ರೀಕಾಂತ್ ಶೆಟ್ಟಿಗಾರ್, ಇಂದಿರಾ ಶೆಟ್ಟಿಗಾರ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ನವ್ಯಶ್ರೀ ನಿರೂಪಿಸಿದರು ಸಾಧಕ ಭರತನಾಟ್ಯ ಕಲಾವಿದೆಯರನ್ನು ಗೌರವಿಸಲಾಯಿತು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಭರತನಾಟ್ಯ ಕಾರ್ಯಕ್ರಮ ನಡೆಯಿತು.
Kshetra Samachara
28/08/2022 03:52 pm