ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳದ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಅಧಿಕಾರಿ ಸ್ಮರಣೆ

ಕಾರ್ಕಳ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ರಾಷ್ಟ್ರ ಭಕ್ತರ ನಿರಂತರ ಹೋರಾಟ, ತ್ಯಾಗ, ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಕಾರ್ಕಳದ ಎಂ.ಡಿ ಅಧಿಕಾರಿ ಅವರ ಪುತ್ರ ರಾಜಕುಮಾರ ಅಧಿಕಾರಿಯವರನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಸಮಿತಿ ವತಿಯಿಂದ ಗೌರವಿಸಲಾಯಿತು.

ಲಕ್ಷಾಂತರ ಜನ ದೇಶ ಭಕ್ತರಲ್ಲಿ ಕಾರ್ಕಳದ ಶ್ರೀ ಎಂ.ಡಿ ಅಧಿಕಾರಿಗಳು ಪ್ರಮುಖರು. ಅವರು ಸೂಡಿ ಬೋಜಪ್ಪ ಹೆಗ್ಡೆ ಮತ್ತು ಶಿವದೇವಿ ಅವರ ಪುತ್ರರಾಗಿ ಮುದ್ರಾಡಿ ಬೀಡಿನಲ್ಲಿ ೧೯೧೩ ಆ.೬ರಂದು ಜನಿಸಿದರು. ಕಾರ್ಕಳದಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ತಮ್ಮ ಧರ್ಮಪತ್ನಿ ಶ್ರೀಮತಿ ಕಮಲಾವತಿ ಅವರೊಂದಿಗೆ ತಮ್ಮ ದಾಂಪತ್ಯ ಜೀವನದ ಪ್ರಾರಂಭದಲ್ಲಿಯೇ ಸ್ವಾತಂತ್ರ‍್ಯ ಹೋರಾಟದಲ್ಲಿ ತೊಡಗಿಸಿಕೊಂಡವರು. ಎಂ.ಡಿ ಅಧಿಕಾರಿಯವರು.೧೯೪೨ ರಲ್ಲಿ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಲಾಠಿಯೇಟಿಗೆ ಎದೆಗೊಟ್ಟು ಬಲಿದಾನಕ್ಕೆ ಮುಂದಾದ ಆದರ್ಶ ಪ್ರಾಯರು. ಸ್ವಾತಂತ್ರ‍್ಯ ಹೋರಾಟವನ್ನು ತಾನು ಎಂದೂ ಬಂಡವಾಳ ಮಾಡಿಕೊಳ್ಳದ ಸರಳ ಸಜ್ಜನರು. ಈ ಸಂದರ್ಭದಲ್ಲಿ ಪುತ್ರ ಹಿರಿಯ ವಕೀಲರಾದ ಎಂ.ಕೆ. ವಿಜಯ ಕುಮಾರ್ ಎಮ್.ಡಿ.ಅಧಿಕಾರಿಗಳ ಸ್ವಾತಂತ್ರ್ಯ ಹೋರಾಟ ಹಾಗೂ ಅವರ ಸಾಮಾಜಿಕ ಸೇವೆಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ರಾಮಚಂದ್ರ ನಾಯಕ್, ಗೌರವ ಅಧ್ಯಕ್ಷರಾದ ಎಸ್. ನಿತ್ಯಾನಂದ ಪೈ, ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ, ಪ್ರಕಾಶ್ ರಾವ್ ಮಾಜಿ ಪುರಸಭಾ ಸದಸ್ಯರು, ಉದ್ಯಮಿ ಕೆರ್ವಾಶೆ ಸತೀಶ್ ಪ್ರಭು, ಸದಸ್ಯರಾದ ವೀಣಾ ರಾಜೇಶ್, ಚಂದ್ರಿಕಾ ರಾವ್ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

28/08/2022 01:18 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ