ಕುಂದಾಪುರ: ಸೋಲೇ ಗೆಲುವಿನ ಮೂಲ. ಸೂರ್ಯ ಹೇಗೆ ಬೆಳಗಿ ಮುಳುಗುತ್ತಾನೋ ಹಾಗೇ ಮತ್ತೆ ಬೆಳಗುತ್ತಾನೆ. ಅದೇ ರೀತಿ ನೀವು ಸೋಲ್ತೀರಿ ಅಂತ ಭಯ ಬೇಡ. ಸೋತು ಗೆಲ್ಲುವವನೇ ನಿಜವಾದ ಸಾಧಕ ಎಂದು ಉದ್ಯಮಿ ತೋನ್ಸೆ ಆನಂದ ಶೆಟ್ಟಿ ಹೇಳಿದರು.
ಅವರು ಇಂದು ಕುಂದಾಪುರದ ಯುವ ಮೆರಿಡಿಯನ್ ನಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘ ಹಮ್ಮಿಕೊಂಡಿದ್ದ "ದಶಮ ಸಂಭ್ರಮ" ಯುವ ಸಾಧಕರಿಗೆ ಸನ್ಮಾನ - ಪ್ರಶಸ್ತಿ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಆಸರೆ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಾಪ ಚಂದ್ರ ಶೆಟ್ಟಿ ಹಳ್ನಾಡು, ಆರು ಬೇರೆ ಬೇರೆ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 112 ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು. ಸಂಘದ ಗೌರವಾಧ್ಯಕ್ಷ ಬಿ. ಉದಯಕುಮಾರ್ ಶೆಟ್ಟಿ ಮಾತನಾಡಿ, ಮಂಗಲಸೂತ್ರ, ಗೃಹಚೇತನ, ಆರೋಗ್ಯ ಭಾಗ್ಯ ಮೊದಲಾದ ಯೋಜನೆಗಳನ್ನು ಯುವ ಬಂಟರ ಸಂಘ ಹಮ್ಮಿಕೊಂಡಿದ್ದೇವೆ ಎಂದರು.
ಈ ಸಂದರ್ಭ ದಕ್ಷ ಪೊಲೀಸ್ ಅಧಿಕಾರಿ ದಿನಕರ ಶೆಟ್ಟಿಯವರಿಗೆ ದಿ. ಮಧುಕರ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ಕೋಶಾಧಿಕಾರಿ ಅಕ್ಷಯ್ ಹೆಗ್ಡೆ ಮೊಳಹಳ್ಳಿ, ವಿದ್ಯಾರ್ಥಿ ವೇತನ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಹೈಕಾಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Kshetra Samachara
28/08/2022 12:59 pm