ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಓದುವ ಮನಸ್ಥಿತಿ ಹೆಚ್ಚಲಿ; ಬಿ.ಎಂ. ರೋಹಿಣಿ

ಮುಲ್ಕಿ: ಹೆಸರು ಮಾಡದ ಅನೇಕ ಪ್ರತಿಭಾಸಂಪನ್ನ ಸಾಹಿತಿಗಳ ಕೃತಿಗಳನ್ನು ಅನಂತ ಪ್ರಕಾಶ ಪ್ರೋತ್ಸಾಹಿಸಿ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ. ಉಮೇಶ ರಾಯರಂತಹ ಹಿರಿಯ ಸಾಹಿತಿಗಳ ಕೃತಿಯನ್ನು ಪ್ರಕಟಿಸಿರುವುದು ಅಭಿನಂದನೀಯ. ಆದರೆ ಓದುವ ಮನಸ್ಥಿತಿ ಕಡಿಮೆಯಾಗುತ್ತಿರುವುದು ನಿರಾಶಾದಾಯಕ ಬೆಳವಣಿಗೆ. ಓದುವ ಮನಸ್ಥಿತಿ ಹೆಚ್ಚಲಿ ಖ್ಯಾತ ಸಾಹಿತಿ ಬಿ.ಎಂ. ರೋಹಿಣಿ ಹೇಳಿದರು.

ಅವರು ಶನಿವಾರ ಕಿನ್ನಿಗೋಳಿ ಅನಂತ ಪ್ರಕಾಶ ಸಂಸ್ಥೆ ರಜತ ಮಹೋತ್ಸವದ ಎರಡನೆಯ ದಿನದ ಕಾರ‍್ಯಕ್ರಮದಲ್ಲಿ ಉಮೇಶ್ ರಾವ್ ಎಕ್ಕಾರು ರವರ ಮೊದಲ ಕಥಾ ಸಂಕಲನ ಗೆಜ್ಜೆ ತೋಟ ಮತ್ತು ಇತರ ಕಥೆಗಳು, ಶ್ರೀಧರ ಡಿ.ಎಸ್. ಅವರ ಮಿನಿ ಕಾದಂಬರಿ ಗೋವಿಪ್ರ, ಗಣೇಶ್ ಕೊಡಗು ಅವರ ಕಥಾ ಸಂಕಲನ ಚದುರಿದ ಕಥೆಗಳು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಹೊಸ ತಲೆಮಾರು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕಾಗಿದೆ. ಪ್ರಕಾಶನ, ಪತ್ರಿಕೆ ಕ್ಷೇತ್ರ ಲಾಭದಾಯಕ ಕ್ಷೇತ್ರಗಳಲ್ಲ. ಹಾಗಾಗಿ ಸಹೃದಯೀ ಮನಸ್ಸುಗಳು ಪ್ರೋತ್ಸಾಹಿಸಬೇಕೆಂದರು.

ಕೈಮಗ್ಗ ತಯಾರಿಕೆಯಲ್ಲಿ ಸಾಧನೆ ಮಾಡಿದ ತಾಳಿಪಾಡಿ ನೇಕಾರರ ಸಹಕಾರಿ ಸಂಘದ ಪರವಾಗಿ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ಅವರಿಗೆ ಅನಂತ ಪ್ರಕಾಶ ಪುರಸ್ಕಾರ ನೀಡಿ ಗೌರವಿಸಲಾಯಿತು. ಕನ್ನಡ ಸೇವಕ ಕುಡುಮಲ್ಲಿಗೆ ಕೃಷ್ಣ ಶೆಟ್ಟರನ್ನು ಗೌರವಿಸಲಾಯಿತು.

ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಉಡುಪಿ ಸುಹಾಸಂನ ಶಾಂತರಾಜ ಐತಾಳ್, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಜ್ಯೋತಿ ಚೇಳಾಯರು, ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ವೇದಿಕೆಯಲ್ಲಿದ್ದರು. ಗಾಯತ್ರೀ ಎಸ್. ಉಡುಪ ನಿರೂಪಿಸಿದರು. ತಡಂಬೈಲು ದುರ್ಗಾಂಬಾ ಮಹಿಳಾ ಮಂಡಳಿಯವರಿಂದ ತಾಳಮದ್ದಲೆ ಹಾಗೂ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಭರತ ಅತಿಕಾಯ ರಾವಣ ಪ್ರದರ್ಶನಗೊಂಡಿತು.

Edited By : PublicNext Desk
Kshetra Samachara

Kshetra Samachara

27/08/2022 08:36 pm

Cinque Terre

3.32 K

Cinque Terre

0

ಸಂಬಂಧಿತ ಸುದ್ದಿ