ಕೋಟ : ಡ್ರಾಮ ಜೂನಿಯರ್ಸ್ 4ನೇ ಆವೃತ್ತಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಮೃದ್ಧಿಗೆ ಕೋಟ ನಾಗರೀಕರಿಂದ ಅದ್ಧೂರಿ ಸ್ವಾಗತದೊಂದಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೋಟದ ಅಮೃತೇಶ್ವರಿ ದೇವಳದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮೃದ್ಧಿಯನ್ನು ಸಮಸ್ತ ನಾಗರೀಕರ ಪರವಾಗಿ ಬಾರಿಕೆರೆ ಯುವಕ ಮಂಡಲದ ನೇತೃತ್ವದಲ್ಲಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೋಟದ ಅಮೃತೇಶ್ವರಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿದ್ದರು. ಸನ್ಮಾನ ಮಾಡಿ ಮಾತನಾಡಿದ ಅವರು, ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು.ಈ ದಿಸೆಯಲ್ಲಿ ಸಮೃದ್ಧಿಯ ಸಾಧನೆ ಎಲ್ಲ ಪುಟಾಣಿಗಳಿಗೂ ಮಾದರಿಯಾಗಿದೆ. ಇಂಥಹ ಸಾಧನೆ ಊರಿಗೆ ಒಂದು ಹೆಗ್ಗಳಿಕೆಯಾಗಿದೆ ಎಂದು ಅಭಿನಂದನೆ ಹೇಳಿದರು.
Kshetra Samachara
24/08/2022 12:08 pm