ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಉಡುಪಿ ಜಿಲ್ಲಾ ರಜತ ಮಹೋತ್ಸವಕ್ಕೆ ಮಣಿಪಾಲ ವಿಶ್ವ ವಿದ್ಯಾಲಯದಿಂದ ರೂ. 25 ಲಕ್ಷ ದೇಣಿಗೆ

ಮಣಿಪಾಲ: ಉಡುಪಿ ಜಿಲ್ಲೆ ರಚನೆಯಾಗಿ ಈ ಅಗಸ್ಟ್ 25 ಕ್ಕೆ 25 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರಜತ ಮಹೋತ್ಸವ ಸಮಾರಂಭ ಅಗಸ್ಟ್ 25 ರಿಂದ ಜನವರಿ 25 ರ ವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸಹಕರಿಸುವಂತೆ ಮಣಿಪಾಲ ವಿಶ್ವ ವಿದ್ಯಾಲಯದವರ ಬಳಿ ಶಾಸಕರಾದ ಕೆ. ರಘುಪತಿ ಭಟ್ ವಿನಂತಿಸಿದ್ದರು. ಶಾಸಕರಾದ ವಿನಂತಿಯಂತೆ ಇಂದು ಮಣಿಪಾಲ ವಿಶ್ವ ವಿದ್ಯಾಲಯದವರು ರೂ. 25 ಲಕ್ಷದ ಚೆಕ್ಕನ್ನು ದೇಣಿಗೆಯಾಗಿ ಶಾಸಕ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ. ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಲೆಫ್ಟಿನೆಂಟ್ ಜನರಲ್ ಡಾll ಎಂ.ಡಿ. ವೆಂಕಟೇಶ್, ಸಹ ಕುಲಾಧಿಪತಿಗಳಾದ ಎಚ್.ಎಸ್ ಬಲ್ಲಾಲ್, ಉಡುಪಿ ಜಿಲ್ಲಾ ರಜತ ಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಮಹೇಶ್ ಠಾಕೂರ್, ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/08/2022 07:40 pm

Cinque Terre

6.84 K

Cinque Terre

1

ಸಂಬಂಧಿತ ಸುದ್ದಿ