ಮುಲ್ಕಿ: ಸಮೀಪದ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರ ಮೊಸರು ಕುಡಿಕೆ ಉತ್ಸವ ಯಕ್ಷಗಾನ ಶೈಲಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣವೇಷಧಾರಿಗಳು ವಿವಿಧ ಬಿರುದಾವಳಿಗಳೊಂದಿಗೆ ಮಡಕೆ ಒಡೆದು ಸಂಭ್ರಮಿಸಿದರು. ಬಳಿಕ ಶ್ರೀ ದೇವರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
20/08/2022 10:52 pm