ಉಡುಪಿ: ಎರಡು ವರ್ಷ ಕೊರೊನಾ ಕಾರಣದಿಂದ ಅಷ್ಟಮಿ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಯಾವ ನಿರ್ಬಂಧಗಳೂ ಇರಲಿಲ್ಲ.ಹೀಗಾಗಿ ವೇಷಧಾರಿಗಳ ಸದ್ದು ನಗರದೆಲ್ಲೆಡೆ ಜೋರಾಗಿದೆ.ಈ ಬಾರಿಯ ವಿಶೇಷ ಎಂದರೆ ವೇಷಧಾರಿಗಳ ಜೊತೆ ಜನರೂ ಕುಣಿದು ಕುಪ್ಪಳಿಸಿದ್ದಾರೆ. ಅದರಲ್ಲೂ ಯುವತಿಯರು ಮತ್ತು ಮಹಿಳೆಯರು ವೇಷಧಾರಿಗಳ ಜೊತೆ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ. ನಗರದ ಪ್ರಸಿದ್ಧ ಜ್ಯುವೆಲ್ಲರಿ ಶಾಪ್ ನ ಯುವತಿಯರು ವೇಷಧಾರಿಗಳ ಜೊತೆ ಸಖತ್ ಕುಣಿದಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
PublicNext
20/08/2022 10:28 pm