ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ 74 ನೇ ಸರಣಿ ಕಾರ್ಯಕ್ರಮ ಗೊಂಬೆ ಮನೆಯಲ್ಲಿ ಜರುಗಿತು. ರಿಲಯನ್ಸ್ ಇಂಡಸ್ಟ್ರೀಸ್ ಲಿ,ನ ನಿವೃತ್ತ ಜನರಲ್ ಮೆನೇಜರ್ ರಾಧಾಕೃಷ್ಣ ಪ್ರಭು ಹಲ್ಗೇರಿ, ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ, ಕಮಿಟಿ ಫ್ರೆಂಡ್ಸ್‌ನ ಗೌರವಾಧ್ಯಕ್ಷ ವಿಜಯ ಮಿನೇಜಸ್, ಹಾಲಿ ಅಧ್ಯಕ್ಷ ದಿನೇಶ್ ದೇವಾಡಿಗ ಹಾಗೂ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು.
ಅಕಾಡೆಮಿಯ ವತಿಯಿಂದ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ವಿಘ್ನೇಶ್ ದೇವಾಡಿಗ ಹಾಗೂ ಕಮಿಟಿ ಫ್ರೆಂಡ್ಸ್ನ ಸದಸ್ಯರಾದ ಶೇಖರ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸ್ಥಳೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನೃತ್ಯ, ದೇಶಭಕ್ತಿ ಗೀತೆಗಳು, ಲಘು ನಾಟಕಗಳು ಕಿಕ್ಕಿರಿದು ನೆರೆದ ಪ್ರೇಕ್ಷಕರನ್ನು ರಂಜಿಸಿತು. ರಾಜೇಂದ್ರ ಪೈ ಯವರು ಕಾರ್ಯಕ್ರಮವನ್ನು ನಿರೂಸಿದರು. ಶಿಕ್ಷಕ ಉದಯ ಭಂಡಾರ್ಕಾರ್, ಹಟ್ಟಿಯಂಗಡಿ ಇವರು ವಂದಿಸಿದರು.
Kshetra Samachara
20/08/2022 05:42 pm