ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲಿನಲ್ಲಿ ವೈಭವದ ಮೊಸರುಕುಡಿಕೆ

ಕಟೀಲು ; ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ನಡೆಯಿತು. ಅಷ್ಟಮಿಯ ಪ್ರಯುಕ್ತ ಕಟೀಲು ದೇವರಿಗೆ ಎರಡು ಬಾರಿ ಅಭಿಷೇಕ ಅಲಂಕಾರ ಪೂಜೆ ನಡೆಯಿತು.ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಂದ್ರಮಂಡಲ ರಥದಲ್ಲಿರಿಸಿ ರಥಬೀದಿಯಿಂದ ಅಜಾರು ವರೆಗೆ ಹುಲಿ ವೇಷ ಗೊಲ್ಲರ ವೇಷ ಕೀಲುಕುದುರೆ ಮುಂತಾದ ವೇಷಗಳೊಂದಿಗೆ ಮೆರವಣಿಗೆ ನಡೆಯಿತು.

ಪಿರಮಿಡ್ ರಚಿಸಿ ಮಡಕೆಗಳನ್ನು ಒಡೆಯಲಾಯಿತು. ಭೂತಕೋಲ, ವಾದ್ಯ ಬ್ಯಾಂಡುಗಳ ಪ್ರದರ್ಶನದ ಬಳಿಕ ಕೃಷ್ಣನ ಮೂರ್ತಿಯನ್ನು ನಂದಿನಿ ನದಿಯಲ್ಲಿ ವಿಸರ್ಜಿಸಲಾಯಿತು.

ಸಾರ್ವಜನಿಕರಿಗೆ ಎಣ್ಣೆ ಅಡಿಕೆ ಮರಹತ್ತುವುದು ಮಡಕೆ ಒಡೆಯುವುದು ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಡಳಿತ ಮಂಡಳಿಯ ವಾಸುದೇವ ಆಸ್ರಣ್ಣ ಸನತ್ ಕುಮಾರ ಶೆಟ್ಟಿ ಅನಂತ ಆಸ್ರಣ್ಣ ಲಕ್ಷ್ಮೀನಾರಾಯಣ ಆಸ್ರಣ್ಣ ಹರಿ ಆಸ್ರಣ್ಣ ಮೋಹನ್ ರಾವ್ ಈಶ್ವರ ಕಟೀಲ್ ದಯಾನಂದ ಮಾಡ ಲೋಕಯ್ಯ ಅಶೋಕ್ ಗುರುರಾಜ್ ತಿಮ್ಮಪ್ಪಕೋಟ್ಯಾನ್ ಶೇಖರ ಅಜಾರು ಕೇಶವ್ ಪ್ರಶಾಂತ್ ನಾಯಕ್ ಜಯರಾಮ ಮುಕ್ಕಾಲ್ದಿ ಮತ್ತಿತರರಿದ್ದರು. ಬಳಿಕ ಸರಸ್ವತೀ ಸದನದಲ್ಲಿ ಕಟೀಲು ಮೇಳದವರಿಂದ ರಂಗಸ್ಥಳಕ್ಕೆ ಆರೂ ಮೇಳಗಳ ದೇವರು ಬಂದ ಬಳಿಕ ಅಷ್ಟಮಿ ಆಟ ನಡೆಯಿತು.

Edited By : PublicNext Desk
Kshetra Samachara

Kshetra Samachara

19/08/2022 07:24 pm

Cinque Terre

3.59 K

Cinque Terre

0

ಸಂಬಂಧಿತ ಸುದ್ದಿ