ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಷ್ಟಮಿಗೆ ರಂಗು ತುಂಬುತ್ತಿರುವ ಹುಲಿವೇಷಗಳು..!

ಉಡುಪಿ: ಅಷ್ಟಮಿಗೂ ಹುಲಿವೇಷಕ್ಕೂ ಬಿಡಿಸಲಾರದ ನಂಟು. ಉಡುಪಿಯ ಅಷ್ಟಮಿ ಸಂಭ್ರಮಕ್ಕೆ ರಂಗು ತುಂಬುವುದೇ ಹುಲಿ ವೇಷ. ಉಡುಪಿಯ ಹುಲಿವೇಷಧಾರಿಗಳ ವೈವಿಧ್ಯ ಮತ್ತು ಸಾಂಪ್ರದಾಯಿಕತೆ ಇತರ ಕಡೆ ಕಾಣಲು ಸಾಧ್ಯವೇ ಇಲ್ಲ.ಅಷ್ಠಮಿ ದಿನ ಕೃಷ್ಣಮಠದ ರಥಬೀದಿಯಲ್ಕಿ ಹುಲಿವೇಷಧಾರಿಗಳು ಕುಣಿಯುತ್ತಾರೆ.ಬಳಿಕ ನಗರದೆಲ್ಲೆಡೆ ತಿರುಗಾಡಿ ಹುಲಿಕುಣಿತ ಮಾಡುತ್ತಾರೆ.

ನಿನ್ನೆಯಿಂದ ಉಡುಪಿಯೆಲ್ಲೆಡೆ ಹುಲಿ ಕುಣಿತಧ್ದೇ ಸದ್ದು.ಉಡುಪಿ ಭಾಗಕ್ಕೇ ಸೀಮಿತವಾದ ಸಾಂಪ್ರದಾಯಿಕ ತಾಸೆ ಮತ್ತು ಕುಣಿತ ಇಲ್ಲಿಯ ವಿಶೇಷತೆ.ಹಿರಿಯರ ಜೊತೆಗೆ ಮಕ್ಕಳೂ ಹುಲಿ ವೇಷ ಹಾಕಿ ಜನರಿಗೆ ಮನರಂಜನೆ ನೀಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.

Edited By : Shivu K
Kshetra Samachara

Kshetra Samachara

19/08/2022 06:29 pm

Cinque Terre

3.99 K

Cinque Terre

0