ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಗೋಪಾಲಕೃಷ್ಣ ಪಾಂಡುರಂಗ ಸನ್ನಿಧಿಯಲ್ಲಿ ಗೋಕುಲಾಷ್ಟಮಿಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರಾತಃಕಾಲ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಹಾಗೂ ಪುಷ್ಪಾಲಂಕಾರ, ಭಕ್ಸ್ಯಾಲಂಕಾರ ಸಹಿತ ವಿವಿಧ ಅಲಂಕಾರಗಳಲ್ಲಿ ದೇವರಿಗೆ ಪೂಜೆ ನಡೆದು ಶೃತಿ ಮೌರಿ ಸೇವೆ, ಕೊಳಲು ವಾದನ ಸೇವೆ, ಹರಿಕಥೆ ಸೇವೆ, ಕುಣಿತ ಭಜನೆಯ ಸೇವೆ, ಯಕ್ಷಗಾನ ಅರ್ಚನೆಯ ಸೇವೆ, ಯಕ್ಷಗಾನ ಸೇವೆ, ಸಂಜೆ ಕೃಷ್ಣ ವೇಷದಾರಿ ಮಕ್ಕಳಿಂದ ಶ್ರೀ ದೇವರಿಗೆ ಮೊಸರು ಕುಡಿಕೆ ಸೇವೆ ನಡೆದು ಶ್ರೀ ಗೋಪಾಲಕೃಷ್ಣ ಪಾಂಡುರಂಗ ಸ್ವಾಮಿಗೆ ಅಷ್ಟಾವಧಾನ ಸೇವೆ ಸಹಿತ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಆಡಳಿತ ಮುಖ್ಯಸ್ಥರು ಅಸಂಖ್ಯಾತ ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
19/08/2022 11:26 am