ಮುಲ್ಕಿ:ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ, ಮಂಗಳೂರು ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ ಹಾಗೂ ಭಾರತದ ಕಾನೂನು ನೆರವು ಕೇಂದ್ರ ಹಳೆಯಂಗಡಿ ಸಹಯೋಗದಲ್ಲಿ ಕುಬಲಗುಡ್ಡೆಯ ಇಂಡಿಯನ್ ಯೋಗ ಮಂದಿರದಲ್ಲಿ ನಿವೃತ್ತ ಯೋಧರಿಗೆ ಗೌರವಾರ್ಪಣೆಯ ಕಾರ್ಯಕ್ರಮ ನಡೆಯಿತು.
ಭಾರತದ ಕ್ರೈಸ್ತ ಚರ್ಚ್ ನ ಮೋಡರೇಟರ್ ರೆವೆ. ಐಸನ್ ಪಾಲನ್ನರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾನತೆ, ಸಹಬಾಳ್ವೆ, ಶಾಂತಿ, ನೆಮ್ಮದಿ ನೆಲೆಯಾಗುವ ಮೂಲಕ ಪ್ರತಿಯೊಬ್ಬರ ಸುಂದರ ಬದುಕಿಗೆ ದಾರಿಯಾಗಬೇಕು ಎಂದರು.ಸಭೆಯ ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚ್ ಗಳ ಒಕ್ಕೂಟದ ಅಧ್ಯಕ್ಷರಾದ ಡೇನಿಯಲ್ ದೇವರಾಜ್ ವಹಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಸಂತ್ ಸಿ.ಎಸ್‌ರವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಸಿಎಸ್ಐ ಚರ್ಚ್ ನ ಸಭಾ ಪಾಲಕ ರೆವೆ. ವಿನಯಲಾಲ್ ಬಂಗೇರಾ, ಎನ್ಐ ಟಿ ಕೆ ಡೊಮಿನಿಕ್ ಪ್ರೊಫೆಸರ್ ಡಾ. ಅರುಣ್,ನಿವೃತ್ತ ಡಿಪೆಸ್ಸ್ ಸ್ಟಾಪ್ ಜೋಸೆಫ್ ಜಾರ್ಜು ಮುಂಬಾಯಿ, ಮಾಜೀ ತಾಪಂ ಸದಸ್ಯೆ ಬೇಬಿ ಎಸ್ ಕೋಟ್ಯಾನ್, ಸಮಾಜ ಸೇವಕಿ ನಂದಾ ಪಾಯಸ್, ವಿಲಿಯಂ ಬಂಟ್ವಾಳ, ರಾಜೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
Kshetra Samachara
16/08/2022 04:07 pm