ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಶಾಂತಿ ಸಹಬಾಳ್ವೆಯೇ ಸ್ವಾತಂತ್ರ್ಯ - ಸ್ಟ್ಯಾನಿ ತಾವ್ರೋ

ಕುಂದಾಪುರ: ಸಂತೋಷ, ಶಾಂತಿ, ಒಗ್ಗಟ್ಟು, ಸಮಾಧಾನ ಮತ್ತು ಸಹಬಾಳ್ವೆಯೇ ಜೀವನ ಮಂತ್ರವಾದಾಗ ನಮ್ಮ ದೇಶದ ಅಭಿವೃದ್ಧಿ ಸಾಧ್ಯ. ಹಾಗಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜ ಅರ್ಥ ಬರುತ್ತದೆ ಎಂದು ಕುಂದಾಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೋ ಹೇಳಿದರು.

ಕೆಥೋಲಿಕ್ ಸಭಾ ಉಡುಪಿ ಇದರ ಕುಂದಾಪುರ ವಲಯ ಸಮಿತಿ, ಸಮುದಾಯ ಕುಂದಾಪುರ, ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಕುಂದಾಪುರ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಗಸ್ಟ್ 15ರಂದು ಸಂಜೆ ಸಂತ ಮೇರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣ, ಕುಂದಾಪುರ ಇಲ್ಲಿ ನಡೆಯಿತು.

ಸ್ವತಂತ್ರ ಭಾರತದ ಪ್ರಜೆಗಳಾದ ನಾವು, ಈ ದೇಶದ ಸಾರ್ವಭೌಮತ್ವ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಹಾಗೂ ಏಕತೆಯ ಭಾವನೆಗಳನ್ನು ಎತ್ತಿ ಹಿಡಿದು ಒಂದೇ ದೇಶದ ಪ್ರಜೆಗಳೆಂದು ಪ್ರೀತಿ, ಸಹನೆ, ಸಹಕಾರದಿಂದ ಜೀವಿಸೋಣ ಎಂದವರು ಹೇಳಿದರು.

ಇದೇ ಸಂದರ್ಭದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ 2022ರ ವೈಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ವಿಜೇತರಾದ ಗುರುರಾಜ್ ಪೂಜಾರಿ, ಅಂತರಾಷ್ಟ್ರೀಯ ಪವರ್ ಲಿಪ್ಪರ್ ಸತೀಶ್ ಖಾರ್ವಿ ಕುಂದಾಪುರ, ಕುಂದಾಪುರ ಪೌರ ಕಾರ್ಮಿಕ ರಾದ ಸುಶೀಲ ಹಾಗೂ ಸರ್ಕಾರಿ ಆಸ್ಪತ್ರೆಯ ಜವಾನ ರಾಮ ಹೆಚ್. ಇವರನ್ನು ಸನ್ಮಾನಿಸಲಾಯಿತು.

ಬಳಿಕ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ (ರಿ.) ಅಧ್ಯಕ್ಷೆ ಮೇರಿ ಡಿ'ಸೋಜ, ವಿನೋದ್ ಕ್ರಾಸ್ಟೋ ಉಪಸ್ಥಿತರಿದ್ದರು.

ಸಮುದಾಯ ಕುಂದಾಪುರ ಇದರ ಅಧ್ಯಕ್ಷ ಉದಯ ಗಾಂವ್ಕರ್ ಸ್ವಾಗತಿಸಿದರು. ರಮೇಶ್ ಗುಲ್ವಾಡಿ ನಿರೂಪಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ನೃತ್ಯಪ್ರದರ್ಶನಗಳು ನಡೆದವು. ಬಳಿಕ ಮಂದಾರ ತಂಡದಿಂದ ಕಯ್ಯೂರಿನ ವೀರರು ಎನ್ನುವ ನಾಟಕ ಪ್ರದರ್ಶನಗೊಂಡಿತು.

Edited By : Nagesh Gaonkar
Kshetra Samachara

Kshetra Samachara

15/08/2022 10:05 pm

Cinque Terre

3.62 K

Cinque Terre

0

ಸಂಬಂಧಿತ ಸುದ್ದಿ