ಮುಲ್ಕಿ:ಭಾರತ ಸ್ವಾತಂತ್ರಗೊಂಡು 75 ವರ್ಷಗಳು ಪೂರ್ಣವಾಗುತ್ತಿರುವ ಸಂಧರ್ಭದಲ್ಲಿ ತಿರಂಗ ಯಾತ್ರಾ ಅಭಿಯಾನ ಸಮಿತಿ ಮುಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆಯಲಿದೆ.
"ಬೃಹತ್ ತಿರಂಗ ಯಾತ್ರೆ"ಸ್ವಾತಂತ್ರ್ಯ ಸೇನಾನಿ ಕಾರ್ನಾಡ್ ಸದಾಶಿವ ರಾವ್ ಹುಟ್ಟೂರು ಮುಲ್ಕಿ ವೀರರಾಣಿ ಅಬ್ಬಕ್ಕರ ಹುಟ್ಟೂರು ಮೂಡುಬಿದಿರೆಯವರೆಗೆ 100 ಮೀಟರ್ ಉದ್ದದ ಧ್ವಜ ಹೊತ್ತು ಒಟ್ಟು 27 ಕಿಲೋಮೀಟರ್ ಸಾಗಲಿದೆ ಎಂದು ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್ ಮಾಧ್ಯಮಕ್ಕೆ ತಿಳಿಸಿದ್ದು ದೇಶಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ತಿರಂಗ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
Kshetra Samachara
13/08/2022 08:01 pm