ಉಡುಪಿ: ಘರ್ ಘರ್ ತಿರಂಗಾ ಅಭಿಯಾನ ಇಂದಿನಿಂದ ದೇಶಾದ್ಯಂತ ಪ್ರಾರಂಭಗೊಂಡಿದೆ.ಜಿಲ್ಲೆಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಮನೆಗಳ ಮೇಲೆ ರಾಷ್ಟ್ರಧ್ವಜ ಹಾರುತ್ತಿವೆ.
ಬೆಳಿಗ್ಗೆ ಎಂಟು ಗಂಟೆಯಾಗುತ್ತಲೇ ಜನರು ತನ್ಮ ಮನೆಗಳಲ್ಲಿ ಧ್ವಜ ಹಾರಿಸುವುದು ಕಂಡು ಬಂತು.ಇಂದಿನಿಂದ ಮೂರು ದಿನಗಳ ಕಾಲ ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಟ ನಡೆಯಲಿದೆ.ಮನೆಯವರೆಲ್ಲ ಜೊತೆಯಾಗಿ ನಿಂತು ಧ್ವಜ ಕಟ್ಟಿ ಸಂಭ್ರಮಿಸುತ್ತಿದ್ದಾರೆ. ಇನ್ನು, ಕೆಲವು ಕಡೆ ಮನೆಮಂದಿ ಧ್ವಜ ಕಟ್ಟಿ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿರುವ ದೃಶ್ಯ ಕಂಡುಬಂತು. ಉಡುಪಿ ಜಿಲ್ಲೆಯಲ್ಲಿ ಅಂದಾಜು ನಾಲ್ಕು ಲಕ್ಷ ಮನೆಗಳಲ್ಲಿ ಧ್ವಜಾರೋಹಣ ಆಗುವ ನಿರೀಕ್ಷೆ ಇದೆ.
Kshetra Samachara
13/08/2022 12:36 pm