ಕುಂದಾಪುರ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವಹಿಂದೂ ಪರಿಷತ್, ಭಜರಂಗದಳ ಕುಂದಾಪುರ ನಗರ, ಬಿ.ಸಿ.ರೋಡ್ ಘಟಕ ವತಿಯಿಂದ ಕೋಟೇಶ್ವರದಿಂದ ಕುಂದಾಪುರದವರೆಗೆ ಶುಕ್ರವಾರ ರಾತ್ರಿ ಆಕರ್ಷಕ ಪಂಜಿನ ಮೆರವಣಿಗೆ ನಡೆಯಿತು.
ಶುಕ್ರವಾರ ರಾತ್ರಿ ಕೋಟೇಶ್ವರದಿಂದ ಹೊರಟ ಮೆರವಣಿಗೆಯು ಪಂಜುಗಳ ಬೆಳಕಿನಿಂದ ಆಕರ್ಷಿತವಾಗಿತ್ತು. ಬೃಹತ್ ರಾಷ್ಟ್ರಧ್ವಜಗಳು ಪಂಜಿನ ಮೆರವಣಿಗೆಗೆ ಮೆರುಗು ನೀಡುತ್ತಿದ್ದವು. ಕಾರ್ಯಕರ್ತರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕುಂದಾಪುರದ ಖಾಸಗೀ ಬಸ್ ನಿಲ್ದಾಣದ ವರೆಗೆ ಸಾಗಿ ಬಂದ ಪಂಜಿನ ಮೆರವಣಿಗೆ ಶಾಸ್ತ್ರಿ ವೃತ್ತದಲ್ಲಿ ಸಮಾಗಮಗೊಂಡಿತು. ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.
Kshetra Samachara
13/08/2022 08:23 am