ಕಾರ್ಕಳ: 1942ರ ಆಗಸ್ಟ್ 8ರಂದು ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ 6 ತಿಂಗಳು ಜೈಲುವಾಸ ಅನುಭವಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಉಡುಪಿ ಜಿಲ್ಲೆಯ ಕಾರ್ಕಳದ ಕೆ.ಶ್ರೀನಿವಾಸ ಕಾಮತ್(98) ಅವರನ್ನು ಗುರುತಿಸಿ ಉಡುಪಿ ಜಿಲ್ಲಾಡಳಿತವು ಇಂದು ಸನ್ಮಾನಿಸಿ ಗೌರವಿಸಿತು.
ಕಾರ್ಕಳದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಇರುವ ಮಾಹಿತಿ ಪಡೆದ ಜಿಲ್ಲಾಡಳಿತ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ಕಾರಣ ಅವರ ವಿಳಾಸವನ್ನು ಸಂಗ್ರಹಿಸಿ ಕಾರ್ಕಳ ತಾಲೂಕು ಕಚೇರಿಯ ಉಪ ತಹಸೀಲ್ದಾರ್ ಮಂಜುನಾಥ ನಾಯಕ್ ಅವರ ನೇತೃತ್ವದಲ್ಲಿ, ಅಧಿಕಾರಿಗಳ ತಂಡ ಬೆಂಗಳೂರಿಗೆ ತೆರಳಿ ಸ್ವಾತಂತ್ರ್ಯ ಹೊರಾಟಗಾರ ಶ್ರೀನಿವಾಸ ಕಾಮತ್ ಅವರ ನಿವಾಸದಲ್ಲಿ ಅವರಿಗೆ ಸಕಲ ಸರಕಾರಿ ಗೌರವಗಳನ್ನು ನೀಡಿ ಸನ್ಮಾನಿಸಿ ಗೌರವಿಸಿತು.
ಸರಕಾರದ ಈ ಗೌರವವನ್ನು ಸಂತಸದಿಂದ ಸ್ವೀಕರಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀನಿವಾಸ ಕಾಮತ್ ಸರಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಸ್ಲಗ್ : "ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ'
PublicNext
10/08/2022 03:53 pm