ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ತುಳು ಸಾಹಿತ್ಯ ಅಕಾಡೆಮಿ ಹೊರತಾಗಿ ತುಳು ಭಾಷೆಗೆ ಸರಕಾರ ಯಾವುದೇ ಕೊಡುಗೆ ನೀಡಿಲ್ಲ!"

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹೊರತಾಗಿ ಸರಕಾರ ಬೇರೆ ಯಾವ ಕೊಡುಗೆಯನ್ನೂ ತುಳು ಭಾಷೆಗೆ ನೀಡಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಖೇದ ವ್ಯಕ್ತಪಡಿಸಿದರು.

ನಗರದ ಉರ್ವಸ್ಟೋರ್ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ವೇದಿಕೆಯಲ್ಲಿ ನಡೆದ ಜೈ ತುಳುನಾಡು ಕುಡ್ಲ ಸಂಘಟನೆ ವತಿಯಿಂದ ನಡೆದ ತುಳುವೆರೆ ಆಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳುನಾಡು ಇಬ್ಭಾಗವಾಗಿ ತುಳು ಭಾಷೆಗೆ ಅನ್ಯಾಯವಾಗಿದೆ. ಇಂದು ತುಳುನಾಡು ಎಂಬ ಕನಿಷ್ಠ ಅನುಕಂಪ ಇಲ್ಲದಾಗಿ ಹೋಯಿತು. ಜನಪದ ಸಂಸ್ಕೃತಿಯಲ್ಲಿ ಶ್ರೀಮಂತವಾಗಿರುವ ತುಳುನಾಡಿನಲ್ಲಿ ಚೆನ್ನು ನಲಿಕೆ, ದುಡಿ ಕುಣಿತ, ಮಾದಿರ, ಕಂಗೀಲು, ಕರಂಗೋಲುಗಳ ಬಗ್ಗೆ ಧ್ವನಿ ಎತ್ತುವವರು ಯಾರು? ಈ ಸಂದರ್ಭ ಜೈ ತುಳುನಾಡು ಸಂಘಟನೆಯ ಯುವಕರು ತುಳುನಾಡು, ತುಳುಭಾಷೆಯ ಬೆಳವಣಿಗೆಗೆ ಆಧಾರ ಸ್ತಂಭವಾಗಿ ನಿಂತಿದ್ದಾರೆ ಎಂದು ಹೇಳಿದರು.

ಜೈ ತುಳುನಾಡು ಸಂಘಟನೆ ಸಣ್ಣಪುಟ್ಟ ಮಕ್ಕಳಿಂದ ತೊಡಗಿ ಹಿರಿಯರಿಗೂ ತುಳುಲಿಪಿಯನ್ನು ಕಲಿಸುವ ಕಾರ್ಯ ಮಾಡಿದೆ. 250ರಷ್ಟು ತುಳುಲಿಪಿ ಶಿಕ್ಷಕರನ್ನು ಸಜ್ಜುಗೊಳಿಸಿದ ಹಾಗೂ 25 ಸಾವಿರದಷ್ಟು ಮಕ್ಕಳಿಗೆ ತುಳುಲಿಪಿಯನ್ನು ಕಲಿಸಿದ ಕೀರ್ತಿ ಜೈ ತುಳುನಾಡು ಸಂಘಟನೆಗೆ ಸಲ್ಲುತ್ತದೆ. ಈ ಮೂಲಕ ತುಳುಲಿಪಿಯನ್ನು ಬಳಸುವ ಬಗ್ಗೆ ಅಭಿಯಾನವೇ ನಡೆಯಿತು. ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತುಳುವ ತಾಯಿಯ ಭಾವಚಿತ್ರವನ್ನು ಅನಾವರಣಗೊಳಿಸಿದ್ದಾರೆ. ಈ ಭಾವಚಿತ್ರವನ್ನು ತುಳುನಾಡಿನ ಎಲ್ಲಾ ಕಾರ್ಯಕ್ರಮಗಳಿಗೆ ಬಳಸಬೇಕೆಂದು ದಯಾನಂದ ಜಿ. ಕತ್ತಲ್ ಸಾರ್ ಮನವಿ ಮಾಡಿದರು.

Edited By : Manjunath H D
PublicNext

PublicNext

07/08/2022 01:40 pm

Cinque Terre

51.03 K

Cinque Terre

0

ಸಂಬಂಧಿತ ಸುದ್ದಿ