ಮೂಲ್ಕಿ: ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಶ್ರೀ ವರಮಹಾಲಕ್ಷ್ಮೀ ಪೂಜೆಗೆ ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ತಮ್ಮ ನೂತನ ಚಲನಚಿತ್ರ "ಅಬತರ"ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು
ಚಿತ್ರವು ಸಾಂಸಾರಿಕ ಹಾಸ್ಯ ಹಿನ್ನಲೆಯ ಚಿತ್ರವಾಗಿದ್ದು ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಚಿತ್ರವನ್ನು ವೀಕ್ಷಿಸಿ ನಮ್ಮನ್ನು ಆಶೀರ್ವದಿಸಬೇಕು ಎಂದು ವಿನಂತಿಸಿದರು.
ಕ್ಷೇತ್ರದ ಅರ್ಚಕ ಶ್ರೀಕೃಷ್ಣ ಶಾಂತಿಯವರು ಶ್ರೀದೇವಿ ಮತ್ತು ಗುರುವರ್ಯರಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.
ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್ ನಟ ಅರ್ಜುನ್ ಕಾಪಿಕಾಡ್ ರವರನ್ನು ಗೌರವಿಸಿದರು.
ಈ ಸಂದರ್ಭ ಬಿರುವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಉದ್ಯಮಿ ಶಶಿ ಅಮೀನ್, ಸಂಘದ ಕಾರ್ಯದರ್ಶಿ ಕಮಲಾಕ್ಷ ಬಡಗುಹಿತ್ಲು, ಕೋಶಾಧಿಕಾರಿ ಪ್ರಕಾಶ್ ಸುವರ್ಣ,ಸದಸ್ಯರಾದ ಯಾದವ ಕೋಟ್ಯಾನ್ ಪಡುಬೈಲು, ವಾಸುಪೂಜಾರಿ,ಉದ್ಯಮಿ ರಮಾನಾಥ ಸುವರ್ಣ, ಉಮೇಶ್ ಮಾನಂಪಾಡಿ ಮತ್ತಿತರರಿದ್ದರು.
Kshetra Samachara
05/08/2022 08:14 pm