ಉಡುಪಿ: ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಆಟಿಡೊಂಜಿ ರೋಟರಿ ಕೂಟ ಹಾಗೂ ಕುಟುಂಬ ಸಹಮಿಲನ ಕಲ್ಯಾಣಪುರದ ಬ್ಯಾಪಿಸ್ಟ್ ಹೋಮ್ ಹೊಲದಲ್ಲಿ ನಡೆಯಿತು.
ಅಸಿಸ್ಟೆಂಟ್ ಗವರ್ನರ್ ರೋ. ಆನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ "ಆಟಿ ಅಂದರೆ ಭಯಂಕರ ಮಳೆ ಸುರಿಯುವ ಹೊತ್ತು. ಹಳ್ಳಿಗರಿಗೆಲ್ಲ ಬಹಳ ಕಷ್ಟದ ದಿನಗಳವು. ಆ ಸಂದರ್ಭ ಕಾಡು-ಗುಡ್ಡ, ಹೊಲ- ಗದ್ದೆಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಹೂ ಹುಲ್ಲು ಸಹಿತ ಗೆಡ್ಡೆ ಗೆಣಸುಗಳನ್ನೇ ಆಹಾರವಾಗಿ ಉಪಯೋಗಿಸುತ್ತಿದ್ದರು. ಹಾಗೆಯೇ ವಿವಿಧ ಆಟಗಳು ಹುಟ್ಟಿಕೊಂಡವು. ಅವುಗಳ ಮಹತ್ವ, ಆರೋಗ್ಯದ ಗುಟ್ಟು ನಾವೆಂದೂ ಮರೆಯಬಾರದು" ಎಂದರು. ಬಂತೆಂದರೆ
ಕೆಸರುಗದ್ದೆಯಲ್ಲಿ ನಾನಾ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ರುಚಿ ಶುಚಿಯಾದ ಆಟಿಯ ಖಾದ್ಯ ವೈವಿಧ್ಯ ಉಣಬಡಿಸಲಾಯಿತು. ಮಣ್ಣಿನ ಕಾಯಕವನ್ನು ಮುಂದುವರೆಸುತ್ತಿರುವ ರೈತರನ್ನುಈ ಸಂದರ್ಭ ರೋಟರಿ ವತಿಯಿಂದ ಗೌರವಿಸಲಾಯಿತು.
Kshetra Samachara
04/08/2022 09:35 pm