ಮುಲ್ಕಿ: ಕರಾವಳಿ ಭಾಗದ ಭಕ್ತಿಯ ಪ್ರತೀಕವಾದ ನಾಳೆ (ಆ 2) ನಾಗರಪಂಚಮಿ ಹಬ್ಬಕ್ಕೆ ಭರ್ಜರಿ ಸಿದ್ದತೆಗಳು ನಡೆಯುತ್ತಿದ್ದರೂ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ವ್ಯಾಪಾರ ವಹಿವಾಟು ಕಳೆಗುಂದಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ನಾಗರ ಪಂಚಮಿಗೆ ಹೂವಿನ ಅಂಗಡಿ ಮಾಲೀಕರು, ಸಿಯಾಳ ವ್ಯಾಪಾರಸ್ಥರು ಭರ್ಜರಿ ಸಿದ್ದತೆ ನಡೆಸುತ್ತಿದ್ದಾರೆ.
ನಾಗರಪಂಚಮಿ ಹಬ್ಬಕ್ಕೆ ಪ್ರಧಾನವಾಗಿ ಬೇಕಾದ ಹಿಂಗಾರ, ಜಾಜಿ, ಮಲ್ಲಿಗೆ ಸೇವಂತಿಗೆ ಹೂಗಳು ಮಾರುಕಟ್ಟೆಗೆ ಬಂದಿದ್ದು ದುಬಾರಿಯಾಗಿದೆ.
ತಿಂಗಳು ಒಂದಕ್ಕೆ 200ರೂ, ಮಲ್ಲಿಗೆ ಹೂವು ಹಟ್ಟಿಗೆ 2400 ರೂ, ಸೇವಂತಿಗೆ, ಕಾಕಡ ಮೊಳಕ್ಕೆ 50ರೂ ನಂತೆ ಬಿಕರಿಯಾಗುತ್ತಿದೆ.
ಒಂದೆಡೆ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರೆ, ಇನ್ನೊಂದೆಡೆ ಕಳೆದ ದಿನಗಳ ಹಿಂದೆ ಸುರತ್ಕಲ್ ನಲ್ಲಿ ನಡೆದ ಅಹಿತಕರ ಘಟನೆಗಳಿಂದ ಜಿಲ್ಲೆಯಲ್ಲಿ ಸಂಜೆ ಆರು ಗಂಟೆ ಬಳಿಕ ಅಂಗಡಿ ಮುಗ್ಗಟ್ಟುಗಳ ಬಂದ್ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದ್ದು ಹಬ್ಬ ಹರಿದಿನಗಳಿಗೆ ಹೊಡೆತ ನೀಡುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ಈ ಬಾರಿಯ ನಾಗರಪಂಚಮಿ ವ್ಯಾಪಾರ ಬೆಲೆ ಏರಿಕೆ ಹಾಗೂ ಅಹಿತಕರ ಘಟನೆಗಳಿಂದ ಕಳಗುಂದಿದೆ
Kshetra Samachara
01/08/2022 02:01 pm