ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಿಳಾ ಮೋರ್ಚಾದಿಂದ 'ಆಷಾಢದಲ್ಲಿ ಒಂದು ದಿನ' ಕಾರ್ಯಕ್ರಮ

ಬೈಂದೂರು: ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಸೇವಿಸುತ್ತಿದ್ದ ತಿನಿಸು, ಅವತ್ತಿನ ಆಚಾರ ವಿಚಾರ ಮತ್ತು ಆಟೋಟಗಳನ್ನು ಈ ತಲೆಮಾರಿಗೆ ಪರಿಚಯಿಸುವ ಸಲುವಾಗಿ ಆಷಾಡದಲ್ಲಿ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೈಂದೂರು ಮಂಡಳ ಮಹಿಳಾ ಮೋರ್ಚಾ ಸದಸ್ಯರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭ ವಿವಿಧ ಬಗೆಯ ಸಾತ್ವಿಕ ಆಹಾರದ ತಿನಿಸುಗಳ ಪ್ರದರ್ಶನ ಮಾಡಿ ಸಹಭೋಜನ ಮಾಡಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. ನೈಸರ್ಗಿಕವಾಗಿ ಬೆಳೆದ ಗೆಡ್ಡೆ, ಗೆಣಸು, ವಿವಿಧ ಬಗೆಯ ಕಾಳುಗಳು, ಸೊಪ್ಪು ಮುಂತಾದ ಧಾನ್ಯಗಳನ್ನು ಬಳಸಿ ಮನೆಯವರು ಮಾಡಿದ ವಿಶೇಷ ಖಾದ್ಯಗಳು ಕಾರ್ಯಕ್ರಮಕ್ಕೆ ಬಂದವರ ಹೊಟ್ಟೆ ಮತ್ತು‌ ಮನವನ್ನು ತಣಿಸಿದವು.

Edited By : Nagesh Gaonkar
Kshetra Samachara

Kshetra Samachara

28/07/2022 08:01 pm

Cinque Terre

20.15 K

Cinque Terre

0

ಸಂಬಂಧಿತ ಸುದ್ದಿ