ಉಡುಪಿ: ಮಿಸ್ ಇಂಡಿಯಾ -2022ರ ವಿಜೇತೆ ಬೆಳ್ಳಂಪಳ್ಳಿಯ ಸಿನಿ ಶೆಟ್ಟಿಗೆ ಬಂಟರ ಸಂಘದ ವತಿಯಿಂದ ಉಡುಪಿಯಲ್ಲಿ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಂಟರ ಯಾನೆ ನಾಡವರ ಮಾತೃ ಸಂಘ, ಉಡುಪಿ ತಾಲೂಕು ಸಮಿತಿ ಹಾಗೂ ತಾಲೂಕಿನ ಎಲ್ಲ ಗ್ರಾಮೀಣ ಬಂಟರ ಸಂಘಗಳ ವತಿಯಿಂದ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಜು. 19ರ ಮಧ್ಯಾಹ್ನ 12.30ಕ್ಕೆ ಅಮ್ಮಣ್ಣಿರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 12ಕ್ಕೆ ಜೋಡುಕಟ್ಟೆಯಿಂದ ಸ್ವಾಗತಿಸಿ, ವಾಹನ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಸಿನಿ ಶೆಟ್ಟಿ ಬೆಳ್ಳಂಪಳ್ಳಿಯಲ್ಲಿರುವ ಭೂತರಾಜರ ಸನ್ನಿಧಾನಕ್ಕೆ ಜು. 19ರ ಸಂಜೆ ಭೇಟಿ ನೀಡಲಿದ್ದಾರೆ.
PublicNext
18/07/2022 09:59 am