ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಲಯನ್ಸ್ ಕ್ಲಬ್ ಪದಗ್ರಹಣ; ಶೈಕ್ಷಣಿಕ ಸಹಾಯ ಹಸ್ತ- ಸಾಧಕರಿಗೆ ಗೌರವ

ಮುಲ್ಕಿ: ಯುವ ಜನತೆ ಕೇವಲ ಲೋಹದಂತಿರದೆ ಉತ್ತಮ ಶಿಲ್ಪವಾಗಿ ಮೂಡಿ ಜೀವದ ಅತ್ಯುನ್ನತ ಮೌಲ್ಯ ಗಳಿಸಿಕೊಳ್ಳಲು ಲಯನ್ಸ್ ತತ್ವ ಆದರ್ಶಗಳು ಸಹಕಾರಿಯಾಗುತ್ತದೆ ಎಂದು ಲಯನ್ಸ್ ಮಾಜೀ ಗವರ್ನರ್ ಕವಿತಾ ಶಾಸ್ತ್ರಿ ಹೇಳಿದರು.

ಮುಲ್ಕಿ ಬಂಟರ ಸಂಘದಲ್ಲಿ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ನೀರಜಾಕ್ಷಿ ಅಗರವಾಲ್ ತಂಡದ ಪದಗ್ರಹಣಾಧಿಕಾರಿಯಾಗಿ ಮಾತನಾಡಿದರು.

ಲಯನ್ಸ್ ಕ್ವೆಸ್ಟ್ ಮೂಲಕ ಶಿಕ್ಷಕರನ್ನು ತರಬೇತುಗೊಳಿಸಿ ಯುವ ಸಮುದಾಯದ ಅಭಿವೃದ್ಧಿಗೆ ಪೂರಕ ವಿಷಯಗಳನ್ನು ನೀಡುವ ಮೂಲಕ ಸದೃಡ ಯುವ ಜನಾಂಗದ ಸೃಷ್ಠಿಗೆ ಲಯನ್ಸ್ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭ ನೀರಜಾಕ್ಷಿ ಅಗರ್ವಾಲ್ ಅಧ್ಯಕ್ಷರಾಗಿ ಹಾಗೂ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭ ಸಿಎಸ್ಐ ಬಾಲಿಕಾಶ್ರಮದ ವಿದ್ಯಾರ್ಥಿನಿಯರಿಗೆ ಸಹಾಯ, ಕೆರೆಕಾಡು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ, ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ನೀಡಲಾಯಿತು.

ಸಿಎ ಪದವಿಗಳಿಸಿದ ಗೌರವ್ ರೈ, ಶೈಕ್ಷಣಿಕ ಸಾಧಕರಾದ ವೀಕ್ಷಾ ಶೆಟ್ಟಿ ಮತ್ತು ಪ್ರಜ್ಞಾ, ಜಿಲ್ಲಾ ಲಿಯೋ ಅಧ್ಯಕ್ಷರಾಗಿ ಆಯ್ಕೆಯಾದ ಕವನ್ ಕುಬೆವೂರು, ಕಾರ್ಯದರ್ಶಿ ಸಿಯಾ ಸುಶೀಲ್, ನಿರ್ಗಮನ ಅಧ್ಯಕ್ಷ ವಿನೋದ್ ಸಾಲ್ಯಾನ್, ಲಿಯೋ ಅಧ್ಯಕ್ಷ ಶೃಜನ್ ಎಚ್. ಪುತ್ರನ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಪ್ರಾಂತೀಯ ಅಧ್ಯಕ್ಷ ಸುಧಾಕರ್ ಶೆಟ್ಟಿ, ವಲಯ ಅಧ್ಯಕ್ಷ ರಮೇಶ್ ರಾಥೋಡ್ ಮತ್ತು ಉಷಾ ಮನೋಜ್, ನಿರ್ಗಮನ ಕಾರ್ಯದರ್ಶಿ ಮಂಜುನಾಥ್, ಕೋಶಾಧಿಕಾರಿ ಸುದರ್ಶನ್ ಪಂಜ ಹಾಗೂ ವಿವಿಧ ಲಯನ್ಸ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಉದಯ ಅಮೀನ್ ಮಟ್ಟು ನಿರೂಪಿಸಿದರು

Edited By : PublicNext Desk
Kshetra Samachara

Kshetra Samachara

17/07/2022 05:05 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ