ಮುಲ್ಕಿ:ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜ್ಞಾನವನ್ನು ಅರಗಿಸಿಕೊಂಡು ಸಮಾಜಕ್ಕೆ ಆಸ್ತಿಯಾಗಿ ಬದುಕಬೇಕೆಂದು ಕುಳಾಯಿ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿ ಕಲಾವತಿ ಹೇಳಿದರು.
ಸುರತ್ಕಲ್ ಗೋವಿಂದದಾಸ ಪದವಿ ಪೂರ್ವಕಾಲೇಜಿನಲ್ಲಿ ಜರಗಿದ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.ವೈ. ವಿ.ರತ್ನಾಕರ್‌ರಾವ್ ಅಧ್ಯಕ್ಷತೆಯನ್ನು ವಹಿಸಿದ್ದು ಕಾಲೇಜಿನ ವಾರ್ಷಿಕ ವಿಶೇಷಾಂಕ ನವ್ಯದಿಗಂತ ವನ್ನು ಬಿಡುಗಡೆಗೊಳಿಸಲಾಯಿತು.ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ.ಪಿ,ಉಪಪ್ರಾಂಶುಪಾಲೆ .ಸುನೀತಾ.ಕೆ ,ವಿದ್ಯಾರ್ಥಿಕ್ಷೇಮಪಾಲೆ .ಪಲ್ಲವಿ, ನವ್ಯದಿಗಂತದ ಸಂಪಾದಕಿ ಡಾ.ಚೇತನಾ. ಬಿ.ಕೆ, ಸಾಹಿತ್ಯ ಸಂಘದ ಮುಖ್ಯಸ್ಥರಾದ ಪ್ರಜ್ವಲಾ ಸನಿಲ್ ಉಪಸ್ಥಿತರಿದ್ದರು.ಐಶ್ವರ್ಯ ಸ್ವಾಗತಿಸಿದರು.ಆಲಾಕಾರ್ಯಕ್ರಮ ನಿರೂಪಿಸಿದರು.
Kshetra Samachara
16/07/2022 09:33 pm