ಮೂಡುಬಿದಿರೆ: ವೃತ್ತಿ ಮತ್ತು ಜೀವನದ ಜತೆಗೆ ಸಮತೋಲನ ಕಾಯ್ದುಕೊಳ್ಳದಿದ್ದರೆ ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಆರೋಗ್ಯವೂ ಹದಗೆಡುತ್ತದೆ. ಆದ್ದರಿಂದ ವೃತ್ತಿ ಮತ್ತು ಜೀವನ ಇವೆರಡನ್ನೂ ಸಂತೋಷದಿಂದ ಸ್ವೀಕರಿಸಿ ಸರಿದೂಗಿಸಿಕೊಂಡು ಹೋದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜೇಸಿಐ ತರಬೇತುದಾರ ಕೃಷ್ಣ ಪವಾರ್ ಹೇಳಿದರು.
ಅವರು ಜೇಸಿಐ ತ್ರಿಭುವನ್ ಮೂಡುಬಿದಿರೆ ಇದರ ವತಿಯಿಂದ ಸಮಾಜ ಮಂದಿರದಲ್ಲಿ ನಡೆದ ಟ್ರೈನಿಂಗ್ ಸೀರೀಸ್‌ನಲ್ಲಿ ಪ್ರಥಮ ಕಾರ್ಯಕ್ರಮವಾಗಿ "ವೃತ್ತಿ ಮತ್ತು ಜೀವನ ಸಮತೋಲನ" ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ಹೆತ್ತವರು ತಮ್ಮ ಮಕ್ಕಳ ಮೇಲೆ ಒತ್ತಡವನ್ನು ಹೇರುವುದರಿಂದ ಕೂಡಾ ಸಂಬಂಧಗಳು ಹದಗೆಡುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಿದರು.
ಜೇಸಿಐ ತ್ರಿಭುವನ್ ಮೂಡುಬಿದಿರೆಯ ಅಧ್ಯಕ್ಷೆ ಶಾಂತಲಾ ಎಸ್.ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಜೇಸಿ ತರಬೇತುದಾರ ಮಹಮ್ಮದಾಲಿ ಅಬ್ಬಾಸ್ ಉದ್ಘಾಟಿಸಿ ಶುಭ ಹಾರೈಸಿದರು. ಹಿರಿಯ ಜೇಸಿ ಸದಸ್ಯ ಪ್ರತಾಪ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರಾಜೆಕ್ಟ್ ಡೈರೆಕ್ಟರ್ ಜೇಸಿ ವೀಣಾ ಸಂತೋಷ್ ಉಪಸ್ಥಿತರಿದ್ದರು. ಜೇಸಿ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಸಚ್ಚಿದಾನಂದ ತರಬೇತುದಾರರನ್ನು ಪರಿಚಯಿಸಿದರು. ಕಾರ್ಯದರ್ಶಿ ಸುನಿಲ್ ವಂದಿಸಿದರು.
Kshetra Samachara
09/07/2022 08:38 am