ಉಳ್ಳಾಲ : ಬೆಂಗಳೂರಿನ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. (MEIL) ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ ಆರ್) ಯಡಿಯಲ್ಲಿ ಸಂಸ್ಥೆ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ 26 ಶಾಲೆಗಳಿಗೆ ತಲಾ ಒಂದು ಲಕ್ಷ ರೂ. ಅನುದಾನದ ಚೆಕ್ ವಿತರಿಸಲಾಯಿತು.
ಬೋಳಿಯಾರಿನ ಅಮರ್ ದೀಪ್ ಸಭಾಂಗಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅನುದಾನದ ಚೆಕ್ಕನ್ನು ವಿತರಿಸಿದರು.
MEIL ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ನಮ್ಮ ಸಂಸ್ಥೆಯ ಅಧಿಕಾರಿಗಳು, ಕಾರ್ಮಿಕರ ಶ್ರಮ, ಸಮಯ ಪರಿಪಾಲನೆ ಪರಿಣಾಮ ಇಂದು ಕಂಪನಿ ಲಾಭ ಗಳಿಸಲು ಸಾಧ್ಯವಾಗಿದೆ. ಸರಕಾರಿ ಕಂಪನಿಗಳಲ್ಲಿ ನಿಷ್ಠೆ, ಶ್ರದ್ಧೆಯಿಂದ ಸಿಬ್ಬಂದಿ ದುಡಿದಲ್ಲಿ ಎಲ್ಲಾ ಕಂಪನಿಗಳು ಉನ್ನತ ಮಟ್ಟಕ್ಕೆ ಏರುವುದಕ್ಕೆ ನಮ್ಮ ಸಂಸ್ಥೆಯೇ ನಿದರ್ಶನ ಎಂದರು.
Kshetra Samachara
07/07/2022 10:52 pm